ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹೋಂ ಸ್ಟೇ ಈಜುಕೊಳದಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದ ಪ್ರವಾಸಿಗ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಬಳಿಯ ಆಯುಷ್ ಹೋಂಸ್ಟೇ ನಲ್ಲಿ ನಡೆದಿದೆ. ಮಡಿಕೇರಿ ಕುಶಾಲನಗರದ ಮೂಲದ ನಿಶಾಂತ್ ಸಾವನ್ನಪ್ಪಿದ ಪ್ರವಾಸಿಗ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

ಕುಶಾಲನಗರದ ಮೊಬೈಲ್ ಗ್ಯಾಲರಿ ಶಾಪ್ ನ ಮಾಲೀಕನಾಗಿದ್ದ ನಿಶಾಂತ್, ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಚಿಕ್ಕಮಗಳೂರಿನ ಕೈಮರ ಬಳಿಯ ಆಯುಷ್ ಹೋಂಸ್ಟೇಗೆ ಬಂದಿದ್ದರು. ಈಜಲೆಂದು ಈಜುಕೊಳಕ್ಕೆ ಹಾರಿದ ವೇಳೆ ತಲೆ ಟ್ವಿಸ್ಟ್ ಆಗಿದೆ. ಈ ದೃಶ್ಯ ಹೋಂಸ್ಟೇ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ












