ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಿ ಓರ್ವ ಸಂತ್ರಸ್ತರನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರಿನ ಜ್ಯೋತಿನಗರದಲ್ಲಿ ನಡೆದಿದೆ.
ಇದನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!

ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಬೇರೆ ಬೇರೆ ಕಡೆಯಿಂದ ಮಹಿಳೆಯರನ್ನು ಕರೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಚಿಚಿಕ್ಕಮಗಳೂರು ನಗರ ಠಾಣೆ ಪಿಐ ಅಭಯಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ದಾಳಿ ನಡೆಸಿ ದಂಧೆ ನಡೆಸುತ್ತಿದ್ದ ಫೌಸಿಯ (34) ಎಂಬ ಆರೋಪಿಯನ್ನು ಬಂಧಿಸಿ ಬಿಎನ್ಎಎಸ್ ಹಾಗೂ ಐಟಿಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಅಂಚೆ ಇಲಾಖೆಯ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ಹೀಗೆ ಚೆಕ್ ಮಾಡಿ ನಿಮ್ಮ ರಿಸಲ್ಟ್
ಮನೆ ಬಾಡಿಗೆ ನೀಡುವಾಗ ಬಾಡಿಗೆದಾರರ ಗುಣ, ನಡತೆ ಬಗ್ಗೆ ನಿಗಾ ಇಡುವಂತೆ ಮತ್ತು ಯಾವುದೇ ತರಹದ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಲ್ಲಿ ಪೊಲೀಸರಿಗೆ ತಿಳಿಸಬೇಕೆಂದು ಹಾಗೂ ಇಂತಹ ಸಂದರ್ಭಗಳಲ್ಲಿ ಮಾಹಿತಿದಾರರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾ ಪೊಲೀಸ್ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; ಆಕರ್ಷಕ ಸಂಬಳ
ಇನ್ನು ಈ ಕಾರ್ಯಾಚಾರಣೆಯಲ್ಲಿ ಚಿಕ್ಕಮಗಳೂರು ನಗರ ಠಾಣೆ ಪಿಐ ಅಭಯಪ್ರಕಾಶ್ ಸೋಮನಾಳ್, ಮಹಿಳಾ ಠಾಣೆಯ ಪಿಎಸ್‌ಐ ನಂದಿನಿ, ಪಿಎಸ್‌ಐ ಗಾಯತ್ರಿ, ಸಿಬ್ಬಂದಿಗಳಾದ ಎಎಸ್‌ಐ ಪ್ರಸನ್ನ, ಅಬ್ದುಲ್ ಖಾದರ್, ಜಯಕುಮರ್ ಎಹೆಚ್ ಸಿ, ವಿದ್ಯಾ & ಜ್ಯೋತಿ ಮಪಿಸಿ ಇದ್ದರು.













