
ಕಳಸ: (NEWS MALNAD FOCUS STORY) ಕಳಸ ಹಾಗೂ ಕುದುರೆಮುಖ ಭಾಗದಲ್ಲಿರುವ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಿಗೆ ಚಿಕ್ಕಮಗಳೂರಿನ ವಿಶೇಷ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೇ 1 ರಂದು ಮಂಗಳೂರಿನಲ್ಲಿ ನಡೆದ ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಹತ್ಯೆ ಮಾಡಿದ್ದ ಆರೋಪಿಗಳು ಒಂದು ತಿಂಗಳ ಹಿಂದೆ ಕಳಸ ಹೋಂ ಸ್ಟೇ ಒಂದರಲ್ಲಿ ಪಾರ್ಟಿ ಮಾಡಿರುವ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ವಿಶೇಷ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಕಳಸ ಕುದರೆಮುಖ ಭಾಗದಲ್ಲಿ ಅನಧಿಕೃತ ಹೋಂ ಸ್ಟೇಗಳು ತಲೆ ಎತ್ತಿದ್ದು, ಈ ಕುರಿತು ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಚಿಕ್ಕಮಗಳೂರಿನ ವಿಶೇಷ ಪೊಲೀಸ್ ತಂಡ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 10th, PUC ವಿದ್ಯಾರ್ಹತೆ
ಕಳಸ ಕುದರೆಮುಖ ಭಾಗದಲ್ಲಿ ಅಕ್ರಮ ಅಸ್ಸಾಂ, ಬಾಂಗ್ಲಾ ವಲಸಿಗರು:
ಕಳಸ ಹಾಗೂ ಕುದರೆಮುಖ ಭಾಗದಲ್ಲಿ ಕಾಫಿ ತೋಟಗಳು ಹೆಚ್ಚಾಗಿದ್ದು, ಈ ಭಾಗದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ತೋಟಗಳಲ್ಲಿ ಮಾತ್ರವಲ್ಲದೆ ರೆಸಾರ್ಟ್‌ಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಜೊತೆಗೆ ಕೆಲವೆಡೆ ನಿರ್ಮಾಣ ಹಂತದಲ್ಲಿರುವ ಬಹುತೇಕ ಕಟ್ಟಡಗಳಲ್ಲಿ, ಸಂತೆಗಳಲ್ಲಿ, ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲಿ ಸ್ಥಳೀಯರಿಗಿಂತ ವಲಸೆ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಾರೆ. ಕೆಲವೆಡೆ ಅವರೇ ಸಂತೆ ವ್ಯಾಪಾರವನ್ನೂ ನಡೆಸುತ್ತಾರೆ.
ಅಕ್ರಮ ವಲಸಿಗರಿಂದ ಹೆಚ್ಚಾದ ಅಪರಾಧ ಕೃತ್ಯ:
ಶೃಂಗೇರಿ, ಕಳಸ, ಕುದರೆಮುಖ ಸೇರಿದಂತೆ ಮಲೆನಾಡು ಭಾಗದಲ್ಲಿ ಅಸ್ಸಾಂ ಹಾಗೂ ಬಾಂಗ್ಲಾನಿಂದ ಬಂದವರು ಎಸಗಿರುವ ಅಪರಾಧ ಕೃತ್ಯಗಳು ಸಾಕಷ್ಟಿವೆ. ಕೇವಲ ಕಳವು ಮಾತ್ರವಲ್ಲ ಹಲ್ಲೆ ಮೊದಲಾದ ಕ್ರೂರ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಪೋಕ್ಸೋ ಪ್ರಕರಣದಲ್ಲಿ ಶೃಂಗೇರಿಯಲ್ಲೇ ಆರು ತಿಂಗಳಲ್ಲಿ ಇಬ್ಬರು ಅಸ್ಸಾಂ ಕಾರ್ಮಿಕರು ಜೈಲು ಪಾಲಾಗಿದ್ದಾರೆ.
ಇದನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ
ತೆಕ್ಕೂರು ಸಮೀಪದ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಆರೋಪಿಯನ್ನು ಪೋಕ್ಸೋ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ. ಈ ಹಿಂದೆ ಬಂಧಿತ ಆರೋಪಿಯೂ ಕೂಡ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದವನಾಗಿದ್ದು, ಶೃಂಗೇರಿಯಲ್ಲಿ ಕಳೆದ ಆರು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ.
ಹಲವು ಎಸ್ಟೇಟ್ ನಲ್ಲಿ ಅಪ್ರಾಪ್ತರ ಕೆಲಸಕ್ಕೆ ನೇಮಕ:
ಹಲವು ಎಸ್ಟೇಟ್ ಗಳಲ್ಲಿ ಅಪ್ರಾಪ್ತರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಕಾರ್ಮಿಕ ಇಲಾಖೆ ವೈಫಲ್ಯ ಇದಕ್ಕೆ ಕಾರಣವಾಗಿದೆ. ಜೊತೆಗೆ ಅಕ್ರಮ ಅಸ್ಸಾಂ ಹಾಗೂ ಬಾಂಗ್ಲಾ ವಲಸಿಗರ ಆಧಾರ್ ಕಾರ್ಡ್ ಪರಿಶೀಲನೆ ನಡೆಸುತ್ತಿದ್ದಾರೆ ಹೊರತು ಎಸ್ಟೇಟ್ ಮಾಲೀಕರ ಪ್ರಭಾವಕ್ಕೆ ಮಣಿದು ಅಂತಹವರ ಮೇಲೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಸ್ಥಳೀಯರಿಂದ ಕೇಳಿ ಬರುತ್ತಿದೆ.
“ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ವಾಹನವನ್ನು ಜಿಲ್ಲೆಯ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಸರಿಯಾಗಿ ತಪಾಸಣೆ ಮಾಡಬೇಕು. ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಗೆ ಕಡ್ಡಾಯವಾಗಿ ಸಿಸಿಟಿವಿಯನ್ನು ಅಳವಡಿಸಬೇಕು. ಜೊತೆಗೆ ನಿರ್ವಹಣೆ ಮಾಡಬೇಕು. ಆಗ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಬಹುದು”- ಅಜಿತ್ ಕಳಸ, ಬಜರಂಗದಳ ಮುಖಂಡ
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ
ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)
ದಿನಾಂಕ: 17 ಮೇ 2025
ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ
ಯಾರು ಭಾಗವಹಿಸಬಹುದು?
BCA / BE / / BSc / MBA ಪದವಿಧರರು
ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು
ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!
ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು













