ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಿರುಪತಿ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು ಜುಲೈ 17 ರಿಂದ ಆರಂಭವಾಗಲಿದ್ದು, ಆರಂಭಕ್ಕೂ ಮುನ್ನವೇ ಹೆಸರಿನ ವಿವಾದ ಶುರುವಾಗಿದೆ.
ಇದನ್ನೂ ಓದಿ: 36,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ

ದತ್ತಾತ್ರೇಯ, ದತ್ತಪೀಠ ಹೆಸರಿಡುವಂತೆ ಮನವಿ:
ತಿರುಪತಿ-ಚಿಕ್ಕಮಗಳೂರು ರೈಲಿಗೆ ದತ್ತಾತ್ರೇಯ ಎಕ್ಸ್‌ಪ್ರೆಸ್ ಅಥವಾ ದತ್ತಪೀಠ ಎಕ್ಸ್‌ಪ್ರೆಸ್ ಇವುಗಳಲ್ಲಿ ಒಂದು ಹೆಸರು ತಿಳಿಸುವಂತೆ ಸಚಿವ ಸೋಮಣ್ಣ ಸೂಚಿಸಿದ್ದರು. ಅಲ್ಲದೆ ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ MP ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರಾಣೇಶ್ ಕೂಡ ದತ್ತಪೀಠ, ದತ್ತಾತ್ರೇಯ ಹೆಸರಿಡಲು ಮನವಿ ಮಾಡಿದ್ದರು.

ಸಾಮಾಜಿಕ ಜಾಲತಾಣ ಒತ್ತಾಯ:
ಇನ್ನೂ ದತ್ತಪೀಠ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳು ತಿರುಪತಿ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲಿಗೆ ದತ್ತಪೀಠ ಎಕ್ಸ್‌ಪ್ರೆಸ್ ಎಂದು ಹೆಸರಿಡಲು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಈ ದಿನದಂದು ಬರೋಲ್ಲ ಹಣ…!
ಶಾಖಾದ್ರಿ ವಂಶಸ್ಥರು, ಮುಸ್ಲಿಂ ಸಂಘಟನೆಗಳಿಂದ ಪತ್ರ:
ದತ್ತಪೀಠ ಅಥವಾ ದತ್ತಾತ್ರೇಯ ಹೆಸರಿಡುವಂತೆ ಬಿಜೆಪಿ, ಹಿಂದೂ ಸಂಘಟನೆಗಳಿಂದ ಮನವಿ ಒಂದು ಕಡೆಯಾದರೆ ಇನ್ನೊಂದೆಡೆ ಟ್ವಿಟ್ಟರ್ (x), ಫೇಸ್ ಬುಕ್ನಲ್ಲಿ ಮುಸ್ಲಿಂ ಸಮುದಾಯದಿಂದ ಬಾಬಾ ಬುಡನ್ ಎಕ್ಸ್‌ಪ್ರೆಸ್ ಹೆಸರಿಡುವಂತೆ ಒತ್ತಾಯ ಕೇಳಿ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಿ ಸೋಮಣ್ಣ ಅವರಿಗೆ ಶಾಖಾದ್ರಿ ವಂಶಸ್ಥರು ಹಾಗೂ ಮುಸ್ಲಿಂ ಸಂಘಟನೆಗಳಿಂದ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಗಮನಕ್ಕೆ; ಗೌರವಧನ ಪಾವತಿಗೆ ಅನುದಾನ ಬಿಡುಗಡೆ












