ಗಬ್ಬು ನಾರುತ್ತಿರುವ ಎನ್.ಆರ್. ಪುರ ತರಕಾರಿ ಮಾರುಕಟ್ಟೆ

ಎನ್.‌ ಆರ್.‌ ಪುರ: (ನ್ಯೂಸ್ ಮಲ್ನಾಡ್ ವರದಿ) ಎಲ್ಲೆಂದರಲ್ಲೇ ಬಿದ್ದಿರುವ ಹಸಿ ತ್ಯಾಜ್ಯ, ಕೊಳತೆ ಹಣ್ಣು – ತರಕಾರಿಗಳ ರಾಶಿ, ಸರಾಗವಾಗಿ ಹರಿಯದ ಕೊಳಚೆ ನೀರು ಇದು ಒಂದೇ ಸೂರಿನಡಿ ತರಕಾರಿ-ಹಣ್ಣು ಸಿಗುವ ಎನ್ ಆರ್ ಪುರ ತರಕಾರಿ ಮಾರುಕಟ್ಟೆ ಸ್ಥಿತಿ.


ಇದನ್ನೂ ಓದಿ: 36,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ವಾರದಲ್ಲಿ ಒಂದು ದಿನ ತರಕಾರಿ ವ್ಯಾಪಾರ ವಹಿವಾಟು ನಡೆಯುವ ಇಲ್ಲಿನ ಸಂತೆ ಮಾರುಕಟ್ಟೆ ಗಬ್ಬೆದ್ದು ದುರ್ನಾತದಿಂದ ನಾರುತಿದ್ದು, ಅದರಲ್ಲಿಯೇ ಪ್ರತಿನಿತ್ಯ ವ್ಯಾಪಾರ-ವಹಿವಾಟು ನಡೆಯುತ್ತಿದೆ.

ಮಳೆ ಸುರಿದಾದರೆ ಸಾಕು ಇಡೀ ಮಾರುಕಟ್ಟೆ ಕಾಲಿಡಲಾಗದ ಗಿಜಿಗಿಜಿ ಎನ್ನುತ್ತಿರುತ್ತದೆ. ಇನ್ನು ಭಾರೀ ಮಳೆ ಸುರಿದರಂತೂ ಮುಗಿಯಿತು ಕತೆ. ಸಾರ್ವಜನಿಕರು ತಿಪ್ಪೆಯಂತ ರಸ್ತೆಗಳಲ್ಲಿ ನಿಂತು ತರಕಾರಿ ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ತರಕಾರಿ ಮಾರಾಟದ ಬಳಿಕ ಅಳಿದುಳಿದ ತ್ಯಾಜ್ಯ ವಿಲೇವಾರಿಯಲ್ಲಿ ಪಟ್ಟಣ ಪಂಚಾಯಿತಿ ವಹಿಸುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಮಾರುಕಟ್ಟೆ ತ್ಯಾಜ್ಯ ಮತ್ತು ತಿಪ್ಪೆ ಸಂಗ್ರಹದ ಸ್ಥಳದಂತೆ ಭಾಸವಾಗುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.

ಕೊಳಚೆ ನೀರು, ಹಸಿ ಕಸ, ಕೊಳೆತ ತರಕಾರಿಗಳು ಇಲ್ಲಿ ಇದ್ದೆ ಇರುತ್ತದೆ. ಪಟ್ಟಣ ಪಂಚಾಯತಿ ಗಮನಕ್ಕೆ ತಂದರು ಸಮಸ್ಯೆಗೆ ಬಗೆಹರಿಸಿಲ್ಲ. ತರಕಾರಿ ಕೊಳ್ಳಲು ಬಂದಾಗ ದುರ್ವಾಸನೆ ಬರುತ್ತಿರುತ್ತದೆ. ಇದು ಮಾರ್ಕೆಟ್ ನ ಸ್ಥಿತಿಯಾದರೆ, ಪಟ್ಟಣದಲ್ಲೂ ಹಲವೆಡೆ ಕಸದ ಸಮಸ್ಯೆ ಇದೆ. ಇದರ ಬಗ್ಗೆಯೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. – ಸಾರ್ವಜನಿಕರು


ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಶಾಕ್; ಇನ್ಮುಂದೆ ಈ ದಿನದಂದು ಬರೋಲ್ಲ ಹಣ…!


ನಿಜಕ್ಕೂ ಇದು ತರಕಾರಿ ಮಾರುಕಟ್ಟೆನಾ ಎಂಬ ಅನುಮಾನ ಮೊದಲ ಬಾರಿಗೆ ಕಾಲಿಡುವವರಿಗೆ ಕಾಡುತ್ತದೆ. ಸಾಕಾಲಕ್ಕೆ ವಿಲೇವಾರಿಯಾಗದ ತರಕಾರಿ ತ್ಯಾಜ್ಯ ಸಂಗ್ರಹಗೊಂಡು ಸಾಂಕ್ರಾಮಿಕ ರೋಗರುಜ್ಜಿನ ಹರಡುವ ಭೀತಿ ಎದುರಾಗುತ್ತದೆ. ಬಿದ್ದ ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶವಿಲ್ಲದೆ ತ್ಯಾಜ್ಯದೊಂದಿಗೆ ಸೇರಿ ದುರ್ನಾತ ಬೀರುತ್ತಿದೆ. ವಾರದ ಮಾರುಕಟ್ಟೆ ಸುತ್ತಲೂ ಇರುವ ನಿವಾಸಿಗಳಿಗೆ ಈಗ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕ ಎದುರಾಗಿದೆ. ಪಟ್ಟಣ ಪಂಚಾಯಿತಿ ಒಮ್ಮೆಯೂ ಇತ್ತ ಕಣ್ಣು ಹಾಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನಾದರೂ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.


ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಗಮನಕ್ಕೆ; ಗೌರವಧನ ಪಾವತಿಗೆ ಅನುದಾನ ಬಿಡುಗಡೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.