ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ನಗರದಿಂದ 2 ಕಿ. ಮೀ. ದೂರದ ತೋಟದಲ್ಲಿ ಹುಲಿಯೊಂದು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರಕ್ಕೆ ಹತ್ತಿರದಲ್ಲಿಯೇ ಹುಲಿ ಇರುವ ಮಾಹಿತಿಯಿಂದ ಜನರೂ ಆತಂಕಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಆಸ್ತಿ ನೋಂದಣಿ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ಆಸ್ತಿ ರಿಜಿಸ್ಟ್ರೇಷನ್ ಗೆ ಈ ದಾಖಲೆಗಳು ಕಡ್ಡಾಯ!

ಇಬ್ಬನಿವಳವಾಡಿ ಗ್ರಾಮದ ಪೊನ್ನ ಚೆಟ್ಟಿರ ಸಂದೀಪ್ ಅವರ ತೋಟದಲ್ಲಿ ಹುಲಿ ಕಂಡುಬಂದಿದೆ. ಹಗಲಿನಲ್ಲಿಯೇ ಹುಲಿ ರಾಜಾರೋಷವಾಗಿ ಸಾಗುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿದ್ದಾರೆ.

ಈ ಪ್ರದೇಶದ ಸುತ್ತಲಿನಲ್ಲಿ ಆಗಾಗ್ಗೆ ಹುಲಿ ಹೆಜ್ಜೆಯ ರೀತಿ ಗುರುತು ಕಂಡುಬಂದಿತ್ತು. ಸಾಮಾನ್ಯವಾಗಿ ಇಲ್ಲಿ ದೊಡ್ಡ ಗಾತ್ರದ ಕಾಡುಬೆಕ್ಕು ಅಥವಾ ಚಿರತೆ ಆಗಾಗ ಕಾಣಿಸಿಕೊಳ್ಳುವುದರಿಂದ ಅದೇ ಆಗಿರಬಹುದೆಂದು ಗ್ರಾಮಸ್ಥರು ಭಾವಿಸಿದ್ದರು. ಈಗ ಸಿಸಿಟಿವಿ ದೃಶ್ಯ ಗಮನಿಸಿದ ಬಳಿಕ ಅದು ಹುಲಿ ಎಂಬುದು ಖಚಿತವಾಗಿದೆ. ಹುಲಿ ಸೆರೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 6 ರಾಶಿಗೆ ಪ್ರಗತಿಯ ಹಾದಿ ತೆರೆಯಲಿದೆ.. ಭರ್ಜರಿ ಲಕ್!
















