ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ಹೆದ್ದಾರಿ ತೀರ್ಥಹಳ್ಳಿ- ಕೋಣಂದೂರು ಗುಡ್ಡೆಕೊಪ್ಪ ಸಮೀಪ ಹಿರೇಸರದಲ್ಲಿ ಕಾಳಿಂಗ ಸರ್ಪ ಅಡ್ಡ ಬಂದ ಹಿನ್ನೆಲೆಯಲ್ಲಿ ಚಾಲಿ ಅಡಿಕೆ ತುಂಬಿದ ಲಾರಿ ಶನಿವಾರ ಪಲ್ಟಿಯಾಗಿದೆ.
ಸಾಗರದಿಂದ ಕಾರ್ಕಳಕ್ಕೆ ಈ ವಾಹನ ತೆರಳುತ್ತಿದ್ದಾಗ ಕಾಳಿಂಗ ಸರ್ಪ ದಿಢೀರ್ ರಸ್ತೆಯಲ್ಲಿ ಅಡ್ಡಬಂದಿದೆ.
ಇದರಿಂದ ಚಾಲಕ ಆತಂಕಗೊಂಡು ಒಮ್ಮೆಲೇ ಬ್ರೇಕ್ ಹಾಕಿದ್ದು ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿ ಹೊಡೆದಿದೆ. ಲಾರಿ ಚಾಲಕ ಯಾವುದೇ ರೀತಿಯ ಅಪಾಯವಾಗದೆ ಪಾರಾಗಿದ್ದಾನೆ..
ಕಾಳಿಂಗ ಸರ್ಪ ಅಡ್ಡ ಬಂದು ಅಡಿಕೆ ವಾಹನ ಪಲ್ಟಿ















