ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಾಯಿ ಅಡ್ಡ ಬಂದ ಹಿನ್ನೆಲೆ ಬೈಕ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಹೆದ್ದಾರಿ ಬಳಿ ನಡೆದಿದೆ.
ಇದನ್ನೂ ಓದಿ; PM Kisan 18ನೇ ಕಂತಿನ ಹಣ ಜಮಾ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಈಗಲೇ ಚೆಕ್ ಮಾಡಿ

ರಾಷ್ಟ್ರೀಯ ಹೆದ್ದಾರಿ ಬಣಕಲ್ ಕೊಟ್ಟಿಗೆಹಾರ ಮದ್ಯ ಇರುವ ಅತ್ತಿಗೆರೆ ಹೆದ್ದಾರಿ ಬಳಿ, ಬಣಕಲ್ ಠಾಣೆಯ ಪೊಲೀಸ್ ಲಕ್ಷ್ಮಣ್ ಅವರ ಬೈಕ್ ಗೆ ನಾಯಿ ಅಡ್ಡ ಬಂದ ಕಾರಣ 10 ಅಡಿ ಕೆಳಗೆ ಪಲ್ಟಿ ಹೊಡೆದಿದೆ. ಹೆಲ್ಮೆಟ್ ಹಾಕಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ. ಗದ್ದೆಗೆ ತಂತಿ ಬೇಲಿ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; ಆರೋಗ್ಯ ವಿಮೆ ಯೋಜನೆ ಜಾರಿ
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್; ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ; ಈ ರೀತಿ ಅರ್ಜಿ ಸಲ್ಲಿಸಿ












