ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯಲ್ಲಿ ನಡೆದಿದೆ. ಗುಲಾಬಿ ಪೂಜಾರ್ತಿ (58) ಇಂದಿರಾನಗರದ ಚೌಡಿಕಟ್ಟೆ ಹತ್ತಿರದ ಸರ್ಕಾರಿ ಬಾವಿಗೆ ಆಯತಪ್ಪಿ ಬಿದ್ದ ಮಹಿಳೆ.
ಇದನ್ನೂ ಓದಿ; ಮಾರುಕಟ್ಟೆಯಲ್ಲಿ ಚೀನೀ ಬೆಳ್ಳುಳ್ಳಿ ಹಾವಳಿ; ಭಾರತ- ಚೀನಾ ಬೆಳ್ಳುಳ್ಳಿಗೆ ವ್ಯತ್ಯಾಸ ಗುರುತಿಸುವುದು ಹೇಗೆ?

ಸೋಮವಾರ ಮಧ್ಯಾಹ್ನ ಬಾವಿಗೆ ಬಿದ್ದಿದ್ದು ಸಂಜೆಯ ವೇಳೆ ಸ್ಥಳೀಯರಿಗೆ ವಿಷಯ ತಿಳಿದಿದೆ. ಬಾವಿಯಲ್ಲಿ ಇದ್ದಂತಹ ಗಟ್ಟಿ ಮುಟ್ಟಾದ ಗಿಡವನ್ನು ಹಿಡಿದು ಮಹಿಳೆ ಕುಳಿತಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ತೀರ್ಥಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ; ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮದ ಎಚ್ಚರಿಕೆ
ಗುಲಾಬಿಯವರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು, ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ; ಟೀ ಜೊತೆ ಸಿಗರೇಟ್ ಸೇದುತ್ತೀರಾ?; ಈಗ್ಲೇ ಬಿಟ್ಟುಬಿಡಿ, ಇಲ್ಲದಿದ್ರೆ ಈ ಕಾಯಿಲೆಗಳು ಬರೋದು ಫಿಕ್ಸ್!












