ಕೊಪ್ಪ: ಒತ್ತುವರಿ ತೆರವಿನ ಭಯ ಹಾಗೂ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲ್ಲೂಕಿನ ಮೇಗುಂದಾ ಹೋಬಳಿಯ ಮೇಗೂರಿನಲ್ಲಿ ರೈತರಾದ ಕರುಣಾಕರ (53) ಎಂಬುವವರು ಸಾಲಬಾಧೆ ಹಾಗೂ ಒತ್ತುವರಿ ತೆರವಿಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಇದನ್ನೂ ಓದಿ; ಮಾರುಕಟ್ಟೆಯಲ್ಲಿ ಚೀನೀ ಬೆಳ್ಳುಳ್ಳಿ ಹಾವಳಿ;  ಭಾರತ- ಚೀನಾ ಬೆಳ್ಳುಳ್ಳಿಗೆ ವ್ಯತ್ಯಾಸ ಗುರುತಿಸುವುದು ಹೇಗೆ?


ಕರುಣಾಕರ ಅವರು ಬದುಕಿಗಾಗಿ ಅಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದರು, ಸ್ಥಳೀಯ ಸೊಸೈಟಿ ಹಾಗೂ ಬ್ಯಾಂಕ್ ಮತ್ತು ಒಂದಷ್ಟು ಕೈಸಾಲ ಸಹ ಮಾಡಿಕೊಂಡಿದ್ದರು. ಮಗಳ ಮದುವೆ ಸಹ ಮಾಡಬೇಕಾಗಿದ್ದು, ಬದುಕಿಗಾಗಿ ಜಮೀನಿನ ಆದಾಯದ ಮೇಲೆ ಅವಲಂಬಿತವಾಗಿದ್ದರು.


ಇದನ್ನೂ ಓದಿ;  ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮದ ಎಚ್ಚರಿಕೆ


ಆದರೆ ಕಳೆದ ಒಂದು ತಿಂಗಳಿನಿಂದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಿತರಾಗಿದ್ದರು, ಸಧ್ಯದಲ್ಲೇ ಒತ್ತುವರಿ ತೆರವು ಮಾಡೇ ಮಾಡುತ್ತಾರೆ, ಮಗಳ ಮದುವೆ ಆಗಿಲ್ಲ, ಸಾಲ ತೀರಿಸಲು ಬೇರೆ ದಾರಿ ಇಲ್ಲಾ ಎಂದೆಲ್ಲಾ ಕುಟುಂಬಸ್ಥರು ಹಾಗೂ ಸ್ಥಳೀಯರ ಬಳಿ ನೋವು ತೋಡಿಕೊಂಡಿದ್ದರು.

ನಿನ್ನೆಯ ದಿನ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ; ಟೀ ಜೊತೆ ಸಿಗರೇಟ್​ ಸೇದುತ್ತೀರಾ?; ಈಗ್ಲೇ ಬಿಟ್ಟುಬಿಡಿ, ಇಲ್ಲದಿದ್ರೆ ಈ ಕಾಯಿಲೆಗಳು ಬರೋದು ಫಿಕ್ಸ್​!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.