ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) 60 ಅಡಿ ಬಾವಿಗೆ ಬಿದ್ದ ವೃದ್ದೆಯನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

90 ವರ್ಷ ವೃದ್ಧೆ ಕಮಲ ಅವರು ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಾವಿಯೊಳಗೆ ಪೈಪ್ ಹಿಡಿದು ಮುಳುಗದಂತೆ ಕಮಲ ಅವರು ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬಾವಿಯಲ್ಲಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ
ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್













