
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಅಜ್ಜಂಪುರದಲ್ಲಿ ಹಣ ಪಾವತಿಸಿದ 15 ದಿನಕ್ಕೆ ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ಕೊಡುವುದಾಗಿ ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಪರಾರಿಯಾಗಿದ್ದು ವಂಚನೆಗೊಳಗಾದ ಜನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮಿಳುನಾಡು ಮೂಲದ ರಾಜ್ ಮೋಹನ್ ಸುಬ್ರಹ್ಮಣಿ ಜನರಿಂದ ಕೋಟ್ಯಂತರ ರೂ. ಲಪಟಾಯಿಸಿ ಪರಾರಿಯಾದವ.
ಇದನ್ನೂ ಓದಿ: ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ₹1,00,000 ಸ್ಕಾಲರ್‌ಶಿಪ್; ಡಿಟೇಲ್ಸ್‌ಗಾಗಿ ಜಸ್ಟ್ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ವಂಚಕ ರಾಜ್ ಮೋಹನ್ ಸುಬ್ರಹ್ಮಣಿ ಎಂಬಾತ ಕೆಲ ದಿನಗಳ ಹಿಂದೆ ಹಲವರೊಂದಿಗೆ ಅಜ್ಜಂಪುರಕ್ಕೆ ಆಗಮಿಸಿ ಹೊಸದುರ್ಗ ರಸ್ತೆಯ ರೈಲ್ವೆ ಗೇಟ್ ಬಳಿ ಮಳಿಗೆಯೊಂದನ್ನು ಬಾಡಿಗೆ ಪಡೆದು ಗೃಹೋಪಯೋಗಿ ವಸ್ತುಗಳ ಅಂಗಡಿ ತೆರೆದಿದ್ದ. ವ್ಯಾಪಕ ಪ್ರಚಾರ ನಡೆಸಿ ಅರ್ಧ ಬೆಲೆಗೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಕೊಡುವುದಾಗಿ ಹೇಳಿದ್ದು ಮಾತ್ರವಲ್ಲ, ಕೆಲವರಿಗೆ ವಸ್ತುಗಳನ್ನು ಸಹ ನೀಡಿ ನಂಬಿಕೆ ಹೆಚ್ಚಿಸಿಕೊಂಡಿದ್ದ.

ಹೀಗಾಗಿ ಅಂಗಡಿಗೆ ಬಂದ ಅಜ್ಜಂಪುರ ಹಾಗೂ ಸುತ್ತಮುತ್ತಲ ಊರುಗಳ ಮಹಿಳೆಯರಷ್ಟೇ ಅಲ್ಲ, ಹೊಸದುರ್ಗ, ಹೊಳಲ್ಕೆರೆ, ಚನ್ನಗಿರಿ ತಾಲೂಕಿನವರು ವಂಚಕ ಆಯಾ ವಸ್ತುಗಳಿಗೆ ನಿಗದಿಪಡಿಸಿದ್ದಷ್ಟು ಹಣ ಪಾವತಿಸಿ 15 ದಿನಗಳ ಬಳಿಕ ಅರ್ಧ ಬೆಲೆಗೆ ಸಿಗುವ ವಸ್ತುಗಳನ್ನು ಖರೀದಿಸುವ ತವಕದಲ್ಲಿದ್ದರು. ವಂಚಕ ರಾಜ್ ಮೋಹನ್ ಸುಬ್ರಹ್ಮಣಿ ರಾತ್ರೋರಾತ್ರಿ ಪರಾರಿಯಾಗಿರುವ ವಿಷಯ ಹೊರಬೀಳುತ್ತಿದ್ದಂತೆ ಶಾಕ್ ಗೆ ಒಳಗಾದ ಜನ ಮಂಗಳವಾರ ಬೆಳಗ್ಗೆ ಅಂಗಡಿ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಏನೆಲ್ಲಾ ತಿದ್ದುಪಡಿ ಮಾಡಿಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ
ಇದೀಗ ರಾಜ್ ಮೋಹನ್ ಸುಬ್ರಹ್ಮಣಿ ವಿರುದ್ಧ ದೂರು ದಾಖಲಾಗಿದೆ.













