ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ಗ್ರಾಮದ ಬೆಳವಿನ ಕುಂಬ್ರಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ಬೆಂಗಳೂರು ಮೂಲದ ಯಾತ್ರಾರ್ತಿ ಗಳು ಶೃಂಗೇರಿ ಶಾರದಾಂಬೆ ದರ್ಶನ್ ಮುಗಿಸಿ ಹೊರನಾಡಿಗೆ ಪ್ರಯಾಣಿಸುವಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ನಲ್ಲಿ ಇದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಇರದ ಸೂಚನಾ ಫಲಕ; ಅಪಾಯಕಾರಿ ಸಂಚಾರ:
ಶೃಂಗೇರಿಯಿಂದ ಹೊರನಾಡಿಗೆ ಗಡಿಕಲ್ಲು, ಹೆಗ್ಗಾರು ಕುಡಿಗೆ, ಅರೇಹಳ್ಳ, ಕೋಟೆತೋಟ ಮಾರ್ಗವಾಗಿ ಪ್ರತಿನಿತ್ಯ 500 ರಿಂದ 1000 ಪ್ರವಾಸಿ ವಾಹನ ಚಲಿಸುವ ಈ ರಸ್ತೆಯಲ್ಲಿ ಒಂದೇ ಒಂದು ಸೂಚನಾ ಫಲಕ ಇಲ್ಲದೆ ಇರುವುದು ವಿಷಾದ ಕರ ಸಂಗತಿ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇಂತಹ ದುರ್ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂಬುದು ನ್ಯೂಸ್ ಮಲ್ನಾಡ್ ಕಳಕಳಿ.
ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?












