ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಒಂದೇ ದಿನ ಮೂರು ಅಪಘಾತಗಳು ನಡೆದಿದೆ.
ಇದನ್ನೂ ಓದಿ; ವಾಟ್ಸಾಪ್ ಬಳಕೆದಾರರಿಗೆ ಅಲರ್ಟ್!; ಇನ್ಮುಂದೆ ಇರಲ್ಲ ಈ ಆಪ್ಷನ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರಿಗೆ ತೀವ್ರವಾಗಿ ಪೆಟ್ಟಾಗಿದ್ದು, ತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ಇನ್ಮುಂದೆ ಇ-ಖಾತಾ ಮಾಡಿಸಲು ಈ ಕೇಂದ್ರದಲ್ಲೂ ಲಭ್ಯ
ಪಿಕಪ್ ಹಾಗೂ ಇನೋವ ವಾಹನಕ್ಕೆ ಡಿಕ್ಕಿ:
ಮಂಗಳೂರಿಗೆ ಮೀನು ತರಲು ಹೊರಟ ಪಿಕಪ್ ಹಾಗೂ ಬೆಂಗಳೂರಿಗೆ ತೆರಳುತ್ತಿದ್ದ ಇನೋವ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದ್ದು, ವಾಹನಗಳು ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೊಂದೆಡೆ ಗೂಡ್ಸ್ ಮಿನಿ ವಾಹನ ಮತ್ತು ಕಾರಿನ ನಡುವೆ ಅಪಘಾತವಾಗಿದೆ. ಚಾರ್ಮಾಡಿ ಘಾಟ್ ನಲ್ಲಿ ಒಟ್ಟು ಮೂರು ಅಪಘಾತಗಳು ನಿನ್ನೆ ಸಂಭವಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ; ಅಪ್ಪಿ-ತಪ್ಪಿ ಈ ಕೆಲಸ ಮಾಡಿದ್ರೆ ರೇಷನ್ ಕಾರ್ಡ್ ರದ್ದು; ಆಹಾರ ಇಲಾಖೆ ಎಚ್ಚರಿಕೆ!












