ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಮಹಾಬಲೇಶ್ವರ ಭಟ್ (78) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇದನ್ನೂ ಓದಿ: ಕಂದಾಯ ಇಲಾಖೆಯಲ್ಲಿ ಜಾಬ್ ಆಫರ್;10th, 12th ವಿದ್ಯಾರ್ಹತೆ

ಕಳೆದ ಹಲವು ವರ್ಷಗಳಿಂದ ಸಾಗರದಲ್ಲಿ ನೆಲೆಸಿದ್ದ ಮಹಾಬಲೇಶ್ವರ ಭಟ್ಟರು ರೈಲ್ವೆ ಸ್ಟೇಷನ್ ಸಮೀಪದ ಶಾರದಾಂಬಾ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಸಾಗರದ ಶೃಂಗೇರಿ ಶಂಕರಮಠದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ; ಸರ್ಕಾರದಿಂದ ನಿಯಮ ಪ್ರಕಟ












