ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿಯ ನೇತೃತ್ವದಲ್ಲಿ ಇದೇ ಭಾನುವಾರ (29.09.2024) ನಾಳೆ ಜಿಲ್ಲಾ ಹಾಗೂ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಸೀಸನ್ 02 ಆಯೋಜಿಸಲಾಗಿದೆ ಎಂದು ವಾಹಿನಿಯ ಮುಖ್ಯಸ್ಥರಾದ ಪ್ರಶಾಂತ್ ಮೂಡಿಗೆರೆ ತಿಳಿಸಿದ್ದಾರೆ.
ಇದನ್ನೂ ಓದಿ; ಕಸ್ತೂರಿ ರಂಗನ್ ವರದಿ ತಿರಸ್ಕಾರ; ಸಚಿವ ಸಂಪುಟ ಸಭೆ ನಿರ್ಧಾರ

ಪುರುಷರ ವಿಭಾಗದಲ್ಲಿ ಹಗ್ಗಾಜಗ್ಗಾಟ-ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ನೂರು ಮೀಟರ್ ಮುಕ್ತ ಓಟ ಸ್ಪರ್ಧೆ, ದಂಪತಿ ಓಟ, 60 ವರ್ಷ ದಾಟಿದ ಹಿರಿಯರಿಗಾಗಿ ಕೂಡ ಓಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ; ಅಕ್ಟೋಬರ್ 7 ರಿಂದ ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮ, ಇದರ ಉದ್ದೇಶವೇನು?
ಕಾರ್ಯಕ್ರಮದಲ್ಲಿ ಎಲ್ಲರನ್ನು ರಂಜಿಸಲು ಖ್ಯಾತ ನಟ-ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ ಗಳು, ರಾಜಕೀಯ ನಾಯಕರು, ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರು ಜೊತೆಯಾಗಲಿದ್ದಾರೆ ಎಂದು ಪಬ್ಲಿಕ್ ಇಂಪ್ಯಾಕ್ಟ್ ಮುಖ್ಯಸ್ಥರಾದ ಪ್ರಶಾಂತ್ ಮೂಡಿಗೆರೆ ತಿಳಿಸಿದ್ದಾರೆ.












