ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೆಸರುಮಯ ರಸ್ತೆಯಲ್ಲಿ ಶಾಲೆಗೆ ಹೋಗಲಾಗದೆ 8ನೇ ತರಗತಿ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಸ್ತೆ ಸರಿಪಡಿಸಲು ಮನವಿ ಮಾಡಿರುವ ಘಟನೆವೊಂದು ಕೊಪ್ಪದಲ್ಲಿ ನಡೆದಿದೆ.
ಇದನ್ನೂ ಓದಿ: 1ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 2ಲಕ್ಷ…!; ಅಂಚೆ ಅಚೇರಿಯಲ್ಲಿದೆ ಭರ್ಜರಿ ಸ್ಕೀಮ್

ಕೊಪ್ಪ ತಾಲ್ಲೂಕಿನ ಮಲಗಾರು ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ, ಈ ಪತ್ರ ಬರೆದು ಚಿತ್ರ ಸಹಿತ ಕಳುಹಿಸಿದ್ದು, ಲೋಕನಾಥಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಓದುತ್ತಿದ್ದು, ತಮ್ಮ ಗ್ರಾಮದ ಮುಖ್ಯ ಸಮಸ್ಯೆ ಇದಾಗಿದೆ. ಶಾಲೆ ಮತ್ತು ಮನೆಗೆ ನಾಲ್ಕು ಕಿಲೋ ಮೀಟರ್ ದೂರವಿದೆ. ರಸ್ತೆ ಕೆಟ್ಟ ಸ್ಥಿತಿಯಲ್ಲಿದ್ದು, ದಾರಿಯುದ್ದಕ್ಕೂ ಕೆಸರು ಮತ್ತು ಹೊಂಡದ ರಸ್ತೆಯಾಗಿದೆ. ಮಳೆಗಾಲದಲ್ಲಿ ಕೆಸರು ನೀರು ರಸ್ತೆಗೆ ಹರಿದು ಬರುವುದರಿಂದ ಶಾಲೆಗೆ ಹೋಗುವುದು ಹರಸಾಹಸವಾಗಿದೆ.

“ಐಎಎಸ್ ಓದುವ ಕನಸು ಹೊಂದಿರುವ ನಾನು ಕಳಪೆ ರಸ್ತೆಯ ಕಾರಣದಿಂದ ವಾರದಲ್ಲಿ ಮೂರು ದಿನ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಹಿರಿಯರು ಮತ್ತು ಮಹಿಳೆಯರ ಆರೋಗ್ಯ ದೃಷ್ಟಿಯಿಂದಲೂ ಈ ರಸ್ತೆ ಅಪಾಯಕಾರಿಯಾಗಿದೆ. ದಯವಿಟ್ಟು ಗ್ರಾಮದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆಕೊಳ್ಳುತ್ತೇನೆ. ನಿಮ್ಮ ಸ್ಪಂದನೆಗಾಗಿ ಕಾಯುವೆ ಎಂದು ಪತ್ರದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಸಿಂಧೂರ ಬರೆದಿದ್ದಾರೆ.

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಾಬ್; ವಿದ್ಯಾರ್ಹತೆ ಡಿಟೈಲ್ಸ್ ಇಲ್ಲಿದೆ ನೋಡಿ













