ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾರು ಹಾಗೂ ಮೀನಿನ ಮಿನಿ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ನಡೆದಿದೆ.
ಇದನ್ನೂ ಓದಿ; ಕಸ್ತೂರಿ ರಂಗನ್ ವರದಿ ತಿರಸ್ಕಾರ; ಸಚಿವ ಸಂಪುಟ ಸಭೆ ನಿರ್ಧಾರ

ಬೆಂಗಳೂರಿನಿಂದ ಧರ್ಮಸ್ಥಳದಿಂದ ಹೋಗುತ್ತಿದ್ದ ಕಾರು, ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಮೀನಿನ ಗಾಡಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮೀನು ತುಂಬಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿದ್ದು, ಕಾರಿನ ಮುಂಭಾಗ ಬಹುತೇಕ ಜಖಂವಾಗಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ; ಅಕ್ಟೋಬರ್ 7 ರಿಂದ ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮ, ಇದರ ಉದ್ದೇಶವೇನು?
ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












