ಶೃಂಗೇರಿ: ಸಾಲಬಾಧೆಯಿಂದ ಮನನೊಂದು ವಾಟರ್ ಮ್ಯಾನ್ ಆತ್ಮಹತ್ಯೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾಲಬಾಧೆಯಿಂದ ಮನನೊಂದು ವಾಟರ್ ಮ್ಯಾನ್ ನೇಣಿಗೆ ಶರಣಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಂದೂರು ಗ್ರಾಮ ಮರಗೇಬೈಲು ನಲ್ಲಿ ನಡೆದಿದೆ. ರಂಗಯ್ಯ ಬಿನ್ ಕೃಷ್ಣಪ್ಪಗೌಡ (51) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

 

ಇದನ್ನೂ ಓದಿ; ಕೋಳಿ ಸಾಕಿದ ರೈತನಿಗೆ 1.3 ಲಕ್ಷ ರೂ ತೆರಿಗೆ; ಗ್ರಾಪಂ ನಿರ್ಧಾರಕ್ಕೆ ಹೈಕೋರ್ಟ್ ಹೇಳಿದ್ದೇನು?

ವಾಟರ್ ಮ್ಯಾನ್ ಆಗಿದ್ದ ರಂಗಯ್ಯ ಧರ್ಮಸ್ಥಳ ಸಂಘ ಸೇರಿದಂತೆ ಹಲವು ಕಡೆ 3 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲಭಾದೆಯಿಂದ ಮನನೊಂದು ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಇದನ್ನೂ ಓದಿ;  ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 24-09-2023

ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಹಸು ಸಾವು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನ ಡಿಕ್ಕಿಯಾಗಿ ಹಸುವೊಂದು ಮೃತ ಪಟ್ಟಿದ್ದು, 2 ರಿಂದ 3 ವಾರಗಳು ಕಳೆದರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ತೆರವುಗೊಳಿಸಿಲ್ಲ.

ಶೃಂಗೇರಿಯಿಂದ ಮಂಗಳೂರು ರಸ್ತೆಯ ನೆಮ್ಮಾರು ಸಮೀಪ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಹಸು ಮೃತಪಟ್ಟು ನಾಯಿಗಳು ತಿನ್ನತ್ತಾ ಇದೆ. ಹಸು ಮೃತಪಟ್ಟು ವಾರಗಳು ಕಳೆದ ಕಾರಣ ಗಬ್ಬೆದ್ದು ನಾರುತ್ತಿದ್ದು ಅಕ್ಕಪಕ್ಕದ ನಿವಾಸಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಇನ್ನು ಘಟನೆ ನಡೆದು ಎರಡು ವಾರ ಸಮೀಪಿಸುತ್ತಿದ್ದರು ಗ್ರಾ. ಪಂಚಾಯಿತಿ ಅಧಿಕಾರಿಗಳು ಮಾತ್ರ ನಿದ್ರೆಯಲ್ಲಿದ್ದಂತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ:
ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಎಲ್ಲೆಂದರಲ್ಲಿ ಗುಂಪುಗುಂಪಾಗಿ ಕಂಡುಬರುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ದ್ವಿಚಕ್ರವಾಹನ ಸವಾರರ ಗೋಳು ಹೇಳತೀರದಾಗಿದೆ. ತಾಲೂಕು ಕೇಂದ್ರವಾದ ಪಟ್ಟಣಕ್ಕೆ ವ್ಯಾಪಾರ- ವಹಿವಾಟಿಗಾಗಿ ನಿತ್ಯ ನೂರಾರು ಜನರು ಬರುತ್ತಾರೆ. ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ಸವಾರರು ಗಾಯಗೊಂಡಿದ್ದಾರೆ.

ಪ್ರಾಣ ಕಳೆದುಕೊಳ್ತಿರೊ ಜಾನುವಾರುಗಳು:
ಕೇವಲ ಬೈಕ್ ಸವಾರರು, ವಾಹನ ಸವಾರರು ಮಾತ್ರ ಗಾಯಗೊಂಡು ಆಸ್ಪತ್ರೆ ಪಾಲಾಗುತ್ತಿಲ್ಲ. ಜಾನುವಾರುಗಳು ಸಹ ಬೈಕ್ ಡಿಕ್ಕಿ, ಬಸ್, ಲಾರಿ, ಆಟೋ ಡಿಕ್ಕಿಗೆ ಪ್ರಾಣವನ್ನೆ ಕಳೆದುಕೊಳ್ಳುತ್ತೀವೆ. ರಸ್ತೆಗಳ ಮೇಲೆಯೆ ದನಗಳು ಕಾಲುಚಾಚಿ ಮಲಗುವುದರಿಂದ ಗಮನಿಸದ ಲಾರಿ ಚಾಲಕರು, ಬಸ್ ಚಾಲಕರು ದನ-ಕರುಗಳ ಕಾಲಿನ ಮೇಲೆ ವಾಹನ ಹರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಜಾನುವಾರುಗಳು ನಡೆಯಲಾಗದೆ ನರಕಯಾತನೆ ಅನುಭವಿಸುತ್ತಿವೆ.

ದನಗಳ ಮಾಲೀಕರ ನಿರ್ಲಕ್ಷ್ಯ:
ಕೆಲವರು ದನಗಳ ಸಾಕಿ ಅವುಗಳನ್ನ ಸರಿಯಾಗಿ ನೋಡಿಕೊಳ್ಳದೆ ರಸ್ತೆಗಳಿಗೆ ಬಿಡುತ್ತಿದ್ದಾರೆ. ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಬದಿಗೆ ಪ್ಲಾಸ್ಟಿಕ್, ತ್ಯಾಜ್ಯಗಳನ್ನ ತಿಂದು ದನಗಳು ಬದುಕುತ್ತಿವೆ. ಹೀಗೆ ರಸ್ತೆಗೆ ದನಗಳನ್ನ ಬಿಟ್ಟು ನಿರ್ಲಕ್ಷ್ಯ ಮೆರೆಯುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ರಸ್ತೆಗಳಲ್ಲಿ ಮನಬಂದತೆ ಅಡ್ಡಾಡೋ ಜಾನುವಾರುಗಳನ್ನ ಗೋಶಾಲೆಗಳಿಗೆ ಕಳುಹಿಸೋ ಕೆಲಸವನ್ನ ಸಂಬಂಧ ಪಟ್ಟ ಅಧಿಕಾರಿಗಳು ಮಾಡಬೇಕಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.