ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿರುವ ಬಗ್ಗೆ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ; ಕೋಳಿ ಸಾಕಿದ ರೈತನಿಗೆ 1.3 ಲಕ್ಷ ರೂ ತೆರಿಗೆ; ಗ್ರಾಪಂ ನಿರ್ಧಾರಕ್ಕೆ ಹೈಕೋರ್ಟ್ ಹೇಳಿದ್ದೇನು?

ಬಾಳೂರು ಹೋಬಳಿ ಕೂವೆ ಕೆಳಗೂರು, ಬಿಳಗ ಬಾಳೂರು ಹಾದೋಣಿ ಗ್ರಾಮಗಳಿಗೆ ಸಂಬಂಧಿಸಿದ ಭೂಮಿ ತಂತ್ರಾಂಶದಲ್ಲಿ, ಸರ್ಕಾರಿ ಜಮೀನನ್ನು ಮಂಜೂರಿದಾರರ ಅರ್ಜಿ, ಸಭಾ ನಡಾವಳಿ, ಸಾಗುವಳಿ ಚೀಟಿ ಇಲ್ಲದೆ ಅಕ್ರಮವಾಗಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದಾರೆ ಎಂದು ತಿಪ್ಪೇಸ್ವಾಮಿ ಎನ್ನುವವರು 4 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 24-09-2023
ಖಾತೆ ದಾಖಲಿಸುವ ಸಮಯದಲ್ಲಿ ಭೂಮಿ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ಆರ್‌ಆರ್‌ಟಿ, ಶಿರಸ್ತೆದಾರರು ಮತ್ತು ಕಂದಾಯ ನಿರೀಕ್ಷಕರುಗಳು ಬೇರೆ ಯಾವುದೋ ಕಡತಕ್ಕೆ ಸಂಬಂಧಿಸಿದ ಸಾಗುವಳಿ ಚೀಟಿಯನ್ನಾಗಿ ಅಪ್ ಲೋಡ್ ಮಾಡಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ದಾಖಲು ಮಾಡಿರುವುದು ಕೂಡ ಕಂಡು ಬಂದಿದೆ. ಈ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಕಲಂ 192(ಎ) ರಂತೆ ಪ್ರಕರಣ ದಾಖಲಿಸಿ ಗಿರೀಶ್ ಮತ್ತು ನೇತ್ರಾವತಿ ರವರುಗಳಿಗೆ ನೋಟಿಸ್ ಜಾರಿ ಮಾಡಿದೆ.
ಅನಧಿಕೃತ ಸಾಗುವಳಿದಾರರನ್ನು ಸಕ್ರಮಗೊಳಿಸಲು ಸರ್ಕಾರದಿಂದ ಶಾಸಕರ ಅಧ್ಯಕ್ಷತೆಯಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ 94-ಎ ರಂತೆ ಸಮಿತಿಯನ್ನು ರಚಿಸಲಾಗಿರುತ್ತದೆ. ಸ್ವೀಕರಿಸಲಾದ ಅರ್ಜಿಗಳನ್ನು ನಮೂನೆ 51 ಅಥವಾ 56 ರ ವಹಿಯಲ್ಲಿ ನಮೂದಿಸಿ ನಿಯಮಾನುಸಾರ ಪರಿಶೀಲಿಸಿ ಅರ್ಹ ಪ್ರಕರಣಗಳನ್ನು ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಯ ಮುಂದೆ ತಹಶೀಲ್ದಾರ್ ರು ಮಂಡಿಸಿ, ಮಂಜೂರಾತಿ ಆದೇಶ ಪಡೆಯಬೇಕಾಗಿರುತ್ತದೆ, ಮಂಜೂರಾತಿ ಆದೇಶದ ನಂತರ, ನಿಗಧಿತ ಶುಲ್ಕ ಪಾವತಿಸಿಕೊಂಡು ತಹಶೀಲ್ದಾರರು ಸಾಗುವಳಿ ಚೀಟಿ ನೀಡಬೇಕಾಗಿದೆ. ಆದರೆ ಯಾವುದೇ ಅರ್ಜಿ ಸಲ್ಲಿಸದೆ, ಸಮಿತಿಯ ಮುಂದೆ ಮಂಡಿಸದೆ ನೇರವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ನಮೂದು ಮಾಡಿರುವುದು ಕ೦ಡುಬ೦ದ ಕಾರಣ ಶಿಸ್ತುಕ್ರಮ ಕೈಗೊಳ್ಳುಲು ಆದೇಶ ನೀಡಿದ್ದಾರೆ.
ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಹಸು ಸಾವು
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನ ಡಿಕ್ಕಿಯಾಗಿ ಹಸುವೊಂದು ಮೃತ ಪಟ್ಟಿದ್ದು, 2 ರಿಂದ 3 ವಾರಗಳು ಕಳೆದರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ತೆರವುಗೊಳಿಸಿಲ್ಲ.
ಶೃಂಗೇರಿಯಿಂದ ಮಂಗಳೂರು ರಸ್ತೆಯ ನೆಮ್ಮಾರು ಸಮೀಪ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಹಸು ಮೃತಪಟ್ಟು ನಾಯಿಗಳು ತಿನ್ನತ್ತಾ ಇದೆ. ಹಸು ಮೃತಪಟ್ಟು ವಾರಗಳು ಕಳೆದ ಕಾರಣ ಗಬ್ಬೆದ್ದು ನಾರುತ್ತಿದ್ದು ಅಕ್ಕಪಕ್ಕದ ನಿವಾಸಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಇನ್ನು ಘಟನೆ ನಡೆದು ಎರಡು ವಾರ ಸಮೀಪಿಸುತ್ತಿದ್ದರು ಗ್ರಾ. ಪಂಚಾಯಿತಿ ಅಧಿಕಾರಿಗಳು ಮಾತ್ರ ನಿದ್ರೆಯಲ್ಲಿದ್ದಂತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ:
ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಎಲ್ಲೆಂದರಲ್ಲಿ ಗುಂಪುಗುಂಪಾಗಿ ಕಂಡುಬರುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ದ್ವಿಚಕ್ರವಾಹನ ಸವಾರರ ಗೋಳು ಹೇಳತೀರದಾಗಿದೆ. ತಾಲೂಕು ಕೇಂದ್ರವಾದ ಪಟ್ಟಣಕ್ಕೆ ವ್ಯಾಪಾರ- ವಹಿವಾಟಿಗಾಗಿ ನಿತ್ಯ ನೂರಾರು ಜನರು ಬರುತ್ತಾರೆ. ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ಸವಾರರು ಗಾಯಗೊಂಡಿದ್ದಾರೆ.
ಪ್ರಾಣ ಕಳೆದುಕೊಳ್ತಿರೊ ಜಾನುವಾರುಗಳು:
ಕೇವಲ ಬೈಕ್ ಸವಾರರು, ವಾಹನ ಸವಾರರು ಮಾತ್ರ ಗಾಯಗೊಂಡು ಆಸ್ಪತ್ರೆ ಪಾಲಾಗುತ್ತಿಲ್ಲ. ಜಾನುವಾರುಗಳು ಸಹ ಬೈಕ್ ಡಿಕ್ಕಿ, ಬಸ್, ಲಾರಿ, ಆಟೋ ಡಿಕ್ಕಿಗೆ ಪ್ರಾಣವನ್ನೆ ಕಳೆದುಕೊಳ್ಳುತ್ತೀವೆ. ರಸ್ತೆಗಳ ಮೇಲೆಯೆ ದನಗಳು ಕಾಲುಚಾಚಿ ಮಲಗುವುದರಿಂದ ಗಮನಿಸದ ಲಾರಿ ಚಾಲಕರು, ಬಸ್ ಚಾಲಕರು ದನ-ಕರುಗಳ ಕಾಲಿನ ಮೇಲೆ ವಾಹನ ಹರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಜಾನುವಾರುಗಳು ನಡೆಯಲಾಗದೆ ನರಕಯಾತನೆ ಅನುಭವಿಸುತ್ತಿವೆ.
ದನಗಳ ಮಾಲೀಕರ ನಿರ್ಲಕ್ಷ್ಯ:
ಕೆಲವರು ದನಗಳ ಸಾಕಿ ಅವುಗಳನ್ನ ಸರಿಯಾಗಿ ನೋಡಿಕೊಳ್ಳದೆ ರಸ್ತೆಗಳಿಗೆ ಬಿಡುತ್ತಿದ್ದಾರೆ. ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಬದಿಗೆ ಪ್ಲಾಸ್ಟಿಕ್, ತ್ಯಾಜ್ಯಗಳನ್ನ ತಿಂದು ದನಗಳು ಬದುಕುತ್ತಿವೆ. ಹೀಗೆ ರಸ್ತೆಗೆ ದನಗಳನ್ನ ಬಿಟ್ಟು ನಿರ್ಲಕ್ಷ್ಯ ಮೆರೆಯುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ರಸ್ತೆಗಳಲ್ಲಿ ಮನಬಂದತೆ ಅಡ್ಡಾಡೋ ಜಾನುವಾರುಗಳನ್ನ ಗೋಶಾಲೆಗಳಿಗೆ ಕಳುಹಿಸೋ ಕೆಲಸವನ್ನ ಸಂಬಂಧ ಪಟ್ಟ ಅಧಿಕಾರಿಗಳು ಮಾಡಬೇಕಿದೆ.













