ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಬಾಳೆಹೊನ್ನೂರು-ಶೃಂಗೇರಿ 33/11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಹಾಗೂ ಎಫ್-3 ಕುಂಚೇಬೈಲು ಪ್ರೇಷಕದ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ 26.09.2023 (ಮಂಗಳವಾರ) ನಾಳೆ ಒಂದು ದಿನ ವಿದ್ಯುತ್ ನಿಲುಗಡೆ ಆಗಲಿದೆ.
ಇದನ್ನೂ ಓದಿ; ಕೋಳಿ ಸಾಕಿದ ರೈತನಿಗೆ 1.3 ಲಕ್ಷ ರೂ ತೆರಿಗೆ; ಗ್ರಾಪಂ ನಿರ್ಧಾರಕ್ಕೆ ಹೈಕೋರ್ಟ್ ಹೇಳಿದ್ದೇನು?

ಮಂಗಳವಾರದಂದು (ನಾಳೆ) ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹಾಲಿ ಬಾಳೆಹೊನ್ನೂರು-ಶೃಂಗೇರಿ 33/11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಹಾಗೂ ಎಫ್-3 ಕುಂಚೇಬೈಲು ಪ್ರೇಷಕದ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶೃಂಗೇರಿ 33/11 ಕೆ.ವಿ ಹಾಗೂ ಜಯಪುರ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಹಸು ಸಾವು
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನ ಡಿಕ್ಕಿಯಾಗಿ ಹಸುವೊಂದು ಮೃತ ಪಟ್ಟಿದ್ದು, 2 ರಿಂದ 3 ವಾರಗಳು ಕಳೆದರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ತೆರವುಗೊಳಿಸಿಲ್ಲ.
ಶೃಂಗೇರಿಯಿಂದ ಮಂಗಳೂರು ರಸ್ತೆಯ ನೆಮ್ಮಾರು ಸಮೀಪ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಹಸು ಮೃತಪಟ್ಟು ನಾಯಿಗಳು ತಿನ್ನತ್ತಾ ಇದೆ. ಹಸು ಮೃತಪಟ್ಟು ವಾರಗಳು ಕಳೆದ ಕಾರಣ ಗಬ್ಬೆದ್ದು ನಾರುತ್ತಿದ್ದು ಅಕ್ಕಪಕ್ಕದ ನಿವಾಸಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಇನ್ನು ಘಟನೆ ನಡೆದು ಎರಡು ವಾರ ಸಮೀಪಿಸುತ್ತಿದ್ದರು ಗ್ರಾ. ಪಂಚಾಯಿತಿ ಅಧಿಕಾರಿಗಳು ಮಾತ್ರ ನಿದ್ರೆಯಲ್ಲಿದ್ದಂತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ:
ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ ಮಿತಿಮೀರಿದ್ದು, ಎಲ್ಲೆಂದರಲ್ಲಿ ಗುಂಪುಗುಂಪಾಗಿ ಕಂಡುಬರುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅದರಲ್ಲೂ ದ್ವಿಚಕ್ರವಾಹನ ಸವಾರರ ಗೋಳು ಹೇಳತೀರದಾಗಿದೆ. ತಾಲೂಕು ಕೇಂದ್ರವಾದ ಪಟ್ಟಣಕ್ಕೆ ವ್ಯಾಪಾರ- ವಹಿವಾಟಿಗಾಗಿ ನಿತ್ಯ ನೂರಾರು ಜನರು ಬರುತ್ತಾರೆ. ರಾಜ್ಯ ಹೆದ್ದಾರಿಯೂ ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಸಾವಿರಾರು ವಾಹನಗಳು ಸಂಚರಿಸುತ್ತವೆ. ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ಸವಾರರು ಗಾಯಗೊಂಡಿದ್ದಾರೆ.
ಪ್ರಾಣ ಕಳೆದುಕೊಳ್ತಿರೊ ಜಾನುವಾರುಗಳು:
ಕೇವಲ ಬೈಕ್ ಸವಾರರು, ವಾಹನ ಸವಾರರು ಮಾತ್ರ ಗಾಯಗೊಂಡು ಆಸ್ಪತ್ರೆ ಪಾಲಾಗುತ್ತಿಲ್ಲ. ಜಾನುವಾರುಗಳು ಸಹ ಬೈಕ್ ಡಿಕ್ಕಿ, ಬಸ್, ಲಾರಿ, ಆಟೋ ಡಿಕ್ಕಿಗೆ ಪ್ರಾಣವನ್ನೆ ಕಳೆದುಕೊಳ್ಳುತ್ತೀವೆ. ರಸ್ತೆಗಳ ಮೇಲೆಯೆ ದನಗಳು ಕಾಲುಚಾಚಿ ಮಲಗುವುದರಿಂದ ಗಮನಿಸದ ಲಾರಿ ಚಾಲಕರು, ಬಸ್ ಚಾಲಕರು ದನ-ಕರುಗಳ ಕಾಲಿನ ಮೇಲೆ ವಾಹನ ಹರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಜಾನುವಾರುಗಳು ನಡೆಯಲಾಗದೆ ನರಕಯಾತನೆ ಅನುಭವಿಸುತ್ತಿವೆ.
ದನಗಳ ಮಾಲೀಕರ ನಿರ್ಲಕ್ಷ್ಯ:
ಕೆಲವರು ದನಗಳ ಸಾಕಿ ಅವುಗಳನ್ನ ಸರಿಯಾಗಿ ನೋಡಿಕೊಳ್ಳದೆ ರಸ್ತೆಗಳಿಗೆ ಬಿಡುತ್ತಿದ್ದಾರೆ. ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಬದಿಗೆ ಪ್ಲಾಸ್ಟಿಕ್, ತ್ಯಾಜ್ಯಗಳನ್ನ ತಿಂದು ದನಗಳು ಬದುಕುತ್ತಿವೆ. ಹೀಗೆ ರಸ್ತೆಗೆ ದನಗಳನ್ನ ಬಿಟ್ಟು ನಿರ್ಲಕ್ಷ್ಯ ಮೆರೆಯುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ರಸ್ತೆಗಳಲ್ಲಿ ಮನಬಂದತೆ ಅಡ್ಡಾಡೋ ಜಾನುವಾರುಗಳನ್ನ ಗೋಶಾಲೆಗಳಿಗೆ ಕಳುಹಿಸೋ ಕೆಲಸವನ್ನ ಸಂಬಂಧ ಪಟ್ಟ ಅಧಿಕಾರಿಗಳು ಮಾಡಬೇಕಿದೆ.












