ಶೃಂಗೇರಿ: ಶ್ರೀ ಶಾರದಾ ಪೀಠ ಶೃಂಗೇರಿ ಇವರ ವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಮಠದ ಸಿಹಿ ಪ್ರಸಾದವನ್ನು ಮತ್ತಿ ಕಂಡ, ಮಲಮಕ್ಕಿ, ಭೈರನಮಕ್ಕಿ ಭಾಗಗಳಿಗೆ ಹಂಚಲಾಯಿತು.

ಶ್ರೀ ಶಾರದಾ ಪೀಠ ಶೃಂಗೇರಿ ಇವರ ವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಮಠದ ಸಿಹಿ ಪ್ರಸಾದ ಹಂಚಲಾಯಿತು. ಶ್ರೀ ಮಠದ ಪರವಾಗಿ ಶ್ರೀ ಶಂಕರ ಭಾರತಿ ಗೋ ಶಾಲೆಯ ಮುಖ್ಯಸ್ಥರಾದ ಪ್ರವೀಣ್ ಖಾಂಡ್ಯ ರವರ ನೇತೃತ್ವದಲ್ಲಿ ನಡೆಯಿತು.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಶ್ರೀ ಮಠದ ಸಿಹಿ ಪ್ರಸಾದವನ್ನು ಸ್ವಯಂ ಸೇವಕರ ಮುಖಾಂತರ ಮತ್ತಿ ಕಂಡ, ಮಲಮಕ್ಕಿ, ಭೈರನಮಕ್ಕಿ ಭಾಗಗಳಿಗೆ ತಲುಪಿಸಲಾಯಿತು. ಈ ಶುಭಕಾರ್ಯದಲ್ಲಿ ಸ್ವಯಂಸೇವಕರಾದ ರಂಜಿತ್ ಮಾಗಲು, ಖಾಂಡ್ಯ ಶಿವಣ್ಣ, ಗೋಪಾಲ, ವಿಜಯ್, ಮನು, ಕೃಷ್ಣ ಮೂರ್ತಿ ಹಾಜರಿದ್ದರು.













