ಬಾಳೆಹೊನ್ನೂರು: ಆನೆ ದಾಳಿಗೆ ಕ್ಷೇತ್ರದಲ್ಲೇ 8 ಜನರ ಬಲಿ.. ಸರ್ಕಾರದ ವಿರುದ್ಧ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಆಕ್ರೋಶ

ಬಾಳೆಹೊನ್ನೂರು:(ನ್ಯೂಸ್ ಮಲ್ನಾಡ್ ವರದಿ)  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ–ಮಲ್ಲಿಗೆಖಾನ್ ಪ್ರದೇಶದಲ್ಲಿ ಸಂಭವಿಸಿದ ಕಾಡಾನೆ ದಾಳಿಯಿಂದ ಹಾವೇರಿ ಮೂಲದ ಕೂಲಿ ಕಾರ್ಮಿಕರು ದುರ್ಘಟನೆಯಾಗಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಹಾಗೂ ಮನಕಲಕುವ ಘಟನೆ. ಈ ದುರಂತ ಸ್ಥಳೀಯ ಜನರಲ್ಲಿ ತೀವ್ರ ಆತಂಕವನ್ನು ಉಂಟುಮಾಡಿದ್ದು, ಅರಣ್ಯ ಅಂಚಿನ ಗ್ರಾಮಗಳ ಜನರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಲಾರ್ ಬೇಲಿ ಮೂಲಕ ಕಾಡಾನೆಗಳ ದಾಳಿಯನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ಶಾಸಕರೇ ಒಪ್ಪಿಕೊಂಡಿರುವ ಸಂದರ್ಭದಲ್ಲಿ, ಅದೇ ಪರಿಹಾರವನ್ನು ಮರು ಜಾರಿಗೆ ತರುವುದು ಎಷ್ಟು ನ್ಯಾಯಸಮ್ಮತ? ಜನರ ಜೀವಕ್ಕಿಂತ ಯೋಜನೆಗಳ ಪ್ರದರ್ಶನಕ್ಕೆ ಆದ್ಯತೆ ನೀಡುವುದು ದುರ್ಭಾಗ್ಯಕರವಾಗಿದೆ ಎಂದರು.

ಇಂದು ಶೃಂಗೇರಿ ಕ್ಷೇತ್ರ ಮತ್ತೊಂದು ದುರಾದೃಷ್ಟಕರ ಘಟನೆಯನ್ನು ಕಂಡಿದೆ. ಈಗಾಗಲೇ ಈ ಕ್ಷೇತ್ರದಲ್ಲಿ 8 ಜನರು ಆನೆ ತುಳಿತದಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ಕಾಡುಕೋಣಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಆದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ವಿಷಾದನೀಯ.

ಆನೆಗಳ ನಡೆದಾಟ, ಓಡಾಟ ಮತ್ತು ಅವುಗಳ ತಾಣಗಳ ಬಗ್ಗೆ ಅರಣ್ಯ ಇಲಾಖೆಗೆ ಸಂಪೂರ್ಣ ಮಾಹಿತಿ ಇದೆ. ಆದರೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಕೊರತೆ ಮತ್ತು ನಿರ್ಲಕ್ಷ್ಯದ ಪರಿಣಾಮವಾಗಿ ಕಾರ್ಮಿಕರು ಹಾಗೂ ತೋಟದ ಮಾಲೀಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಂತರ ಸರ್ಕಾರ 20 ಲಕ್ಷ ರೂಪಾಯಿಗಳ ಪರಿಹಾರ ನೀಡಿ ಕೈ ತೊಳೆಯುವುದು ಪರಿಹಾರವಲ್ಲ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಆದುದರಿಂದ, ಆನೆ ದಾಳಿ ಅಥವಾ ಮಲೆನಾಡಿನ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗುವ ಪ್ರತಿಯೊಂದು ರೈತ ಅಥವಾ ಕಾರ್ಮಿಕ ಕುಟುಂಬಕ್ಕೂ ಕನಿಷ್ಠ 50 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು.

ಯಾವುದೇ ಪರಿಹಾರಧನವನ್ನು ಸಂಬಂಧಿಸಿದ ಗ್ರಾಮದಲ್ಲಿ ಘಟನೆ ನಡೆದ ಸ್ಥಳದ ಗ್ರಾಮ ಮುಖ್ಯಸ್ಥರ ಮೂಲಕವೇ ವಿತರಿಸಬೇಕು ಇದಲ್ಲದೆ, ಉತ್ತರ ಕರ್ನಾಟಕ ಹಾಗೂ ಪರರಾಜ್ಯಗಳಿಂದ ಕೆಲಸಕ್ಕಾಗಿ ಬಂದಿರುವ ಕಾರ್ಮಿಕರ ಸುರಕ್ಷತೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಅವರಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದು ಸ್ಪಷ್ಟವಾಗಬೇಕು.
ಯಾವುದೇ ಪರಿಹಾರಧನವನ್ನು ಸಂಬಂಧಿಸಿದ ಗ್ರಾಮದಲ್ಲಿ ಘಟನೆ ನಡೆದ ಸ್ಥಳದ ಗ್ರಾಮ ಮುಖ್ಯಸ್ಥರ ಮೂಲಕವೇ ವಿತರಿಸಬೇಕು. ಇದರಿಂದ ಪಾರದರ್ಶಕತೆ ಮತ್ತು ನ್ಯಾಯಯುತ ವಿತರಣೆಗೆ ಸಹಾಯವಾಗುತ್ತದೆ.
ಜನರ ಜೀವ ರಕ್ಷಣೆ ಸರ್ಕಾರದ ಪ್ರಥಮ ಕರ್ತವ್ಯ. ಯೋಜನೆಗಳ ಪ್ರಚಾರಕ್ಕಿಂತ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ ಎಂದು ಸುಧಾಕರ್ ಶೆಟ್ಟಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.