ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ಶೃಂಗೇರಿ ತಾಲೂಕು ಶೃಂಗೇರಿ ವಲಯದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನ ನಡೆಸಲಾಯಿತು.
ಕಾರ್ಯಕ್ರಮವನ್ನು ಶ್ರೀ ವೈ ಆರ್ ಮಂಜುನಾಥ್ ಯಡದಾಳ್, ಇವರ ಅಧ್ಯಕ್ಷತೆಯಲ್ಲಿ ಹಾಗೂ ಜನಜಾಗೃತಿ ವೇದಿಕೆ ಸದಸ್ಯರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಪ್ರಗತಿಪರ ಕೃಷಿಕರು ಹಾಗೂ ಊರಿನ ಹಿರಿಯರಾದ ರಾಮಣ್ಣ ನಾಯ್ಕ್ ಸೂರ್ಗೋಡು ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿದರು.

ಧಾರ್ಮಿಕ ಉಪನ್ಯಾಸವನ್ನು ಡಾ. ಮಂದಾರ ಜೈನ ಮತ್ತು ಶ್ರೀಮತಿ ಜಯಶ್ರೀ ಗಣೇಶ್ ಇವರು ನಡೆಸಿಕೊಟ್ಟರು. ಯೋಜನಾಧಿಕಾರಿಗಳಾದ ಸುರೇಶ್ ಇವರು ಪ್ರಾಸ್ತಾವಿಕ ಮಾತನಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಅತಿಥಿಗಳಾದ ಶ್ರೀ ಕೃಷ್ಣಮೂರ್ತಿ ಸಾಹಿತಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಶ್ ಹೆಕ್ತುರ್, ಶ್ರೀ ಮಂಜುನಾಥ್ ಋಷ್ಯಶೃಂಗಾ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಶ್ರೀ ದಿನೇಶ್ ಮುಖ್ಯ್ಯೊಪಾಧ್ಯಯರು, ಗ್ರಾಮ ಪಂಚಾಯತ್ ಸದಸ್ಯರಾದ ನಟೇಶ್, ಎಸ್, ಡಿ, ಎಂ, ಸಿ ಅಧ್ಯಕ್ಷರಾದ ಕೃತಿಶ್, ಜನಜಾಗೃತಿ ಸದಸ್ಯರಾದ ಡಿ, ಸಿ ಶಂಕ್ರಪ್ಪ, ಕೆಲವಳ್ಳಿ ಕಳಸಪ್ಪ, ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ರಾಘವೇಂದ್ರ ಮತ್ತು ಅಧ್ಯಕ್ಷರು ಮಾತನಾಡಿ ಯೋಜನೆ ಬಗ್ಗೆ ಹಾಗೂ ಪೂಜ್ಯರು ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ನಾಟಿ ವೈದ್ಯರಾದ ಶ್ರೀ ಲಕ್ಷ್ಮಣ್ ನಾಯ್ಕ್ ಹಾಗೂ ನಿವೃತ್ತ ಸೈನಿಕರಾದ ಮಂಜುನಾಥ್ ಗುತ್ತಳಿಕೆ ಇವರ ಸೇವೆಯನ್ನು ಗುರುತಿಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು, ಅದರ ಜೊತೆಗೆ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಒಕ್ಕೂಟಗಳಿಗೂ ಗೌರವ ಸಮರ್ಪಣೆಯನ್ನು ಮಾಡಲಾಯಿತು.
ಕಾರ್ಯ ಕ್ರಮದ ಸ್ವಾಗತವನ್ನು ಮೇಲ್ವಿಚಾರಕಾರದ ಶಕುಂತಲಾರವರು ಮಾಡಿದ್ದು, ವಲಯದ ಸಾಧನಾ ವರದಿಯನ್ನು ಸೇವಾಪ್ರತಿನಿಧಿ ರೇಣುಕಾರವರು ಮಂಡಿಸಿದರು. ಸೇವಾಪ್ರತಿನಿಧಿ ವಿನುತಾರವರು ಧನ್ಯವಾದ ತಿಳಿಸಿದ್ದಾರೆ. ಕಾರ್ಯಕ್ರಮದ ನಿರೂಪಣೆ ಜಿಲ್ಲಾ ವಿಮಾ ಸಮನ್ವಯಧಿಕಾರಿ ಶ್ರೀ ಸುಬ್ರಮಣ್ಯ ಹಾಗೂ ಶಾಲಾ ಶಿಕ್ಷಕಿ ನೇತ್ರಾವತಿ ನೆರೆವೆರಿಸಿದ್ದಾರೆ. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ವಲಯದ ಸೇವಾಪ್ರತಿನಿಧಿಗಳು, ಸಿ ಎಸ್ ಸಿ ಸೇವಾದಾರರು, ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು, ಶಾಲಾಮಕ್ಕಳು& ಒಕ್ಕೂಟ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.













