SSLC ಪರೀಕ್ಷೆಯಲ್ಲಿ ಶೃಂಗೇರಿಗೆ ಮೊದಲ ಸ್ಥಾನ | ಯಾವ ಶಾಲೆಗೆ ಎಷ್ಟು ಫಲಿತಾಂಶ, ಇಲ್ಲಿದೆ ನೋಡಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೃಂಗೇರಿ ತಾಲೂಕಿನಲ್ಲಿ ಒಟ್ಟು 523 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 518 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪಟ್ಟಣದ ಶ್ರೀ ರಾಮಕೃಷ್ಣ ಆಂಗ್ಲಮಾಧ್ಯಮ ಪ್ರೌಢಶಾಲೆ, ಬೇಗಾರು ಕೆಪಿಎಸ್ ಪ್ರೌಢಶಾಲೆ, ಮೊರಾರ್ಜಿ ಶಾಲೆ, ವೈಕುಂಠಪುರ ಪ್ರೌಢಶಾಲೆ, ಬಿಜಿಎಸ್ ಪ್ರೌಢಶಾಲೆ, ಜ್ಞಾನಭಾರತೀ ವಿದ್ಯಾಕೇಂದ್ರ ಶೇಕಡ ನೂರು ಫಲಿತಾಂಶಗಳಿಸಿವೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಶೇ.81, ಜೆಸಿಸ್ ಶಾಲೆ 90, ತೊರೆಹಡ್ಲು ಪ್ರೌಢಶಾಲೆ 91, ಹೊಳೆಕೊಪ್ಪ 91ಫಲಿತಾಂಶ ಗಳಿಸಿದೆ.


ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಶೃಂಗೇರಿಗೆ ಮೊದಲ ಸ್ಥಾನ:
ಜಿಲ್ಲೆಗೆ ಶೃಂಗೇರಿ ಶೈಕ್ಷಣಿಕ ವಲಯ ಪ್ರಥಮ ಸ್ಥಾನ ಪಡೆದಿದೆ. ಶೃಂಗೇರಿ ಶೈಕ್ಷಣಿಕ ವಲಯ ಶೇ.92ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಕಡೂರು ಶೈಕ್ಷಣಿಕ ವಲಯ 68.94 ಫಲಿತಾಂಶ ಪಡೆಯುವ ಮೂಲಕ ಕೊನೇ ಸ್ಥಾನದಲ್ಲಿದೆ.

ಗ್ರಾಮೀಣ ಮಕ್ಕಳ ಮೇಲುಗೈ:
ಜಿಲ್ಲೆಯಲ್ಲಿನ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಮನಿಸಿದರೆ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಗಮನಾರ್ಹವಾಗಿದೆ.

ಗ್ರಾಮೀಣ ಪ್ರದೇಶದ 8,752 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇವರಲ್ಲಿ 6,589 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ. 75.28ರಷ್ಟು ಫಲಿತಾಂಶ ಪಡೆದಿದ್ದಾರೆ. ಇನ್ನು ನಗರ ಪ್ರದೇಶದ 4,267 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 2,976 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.69. 74 ರಷ್ಟು ಫಲಿತಾಂಶ ಲಭಿಸಿದೆ.


ಇದನ್ನೂ ಓದಿ: ಮನೆಯಲ್ಲಿ ಪಾಲಿಶ್ ಅಕ್ಕಿ ಬಳಸೋ ಮುನ್ನ ಹುಷಾರ್; ಹೊರಬಿತ್ತು ಅಘಾತಕಾರಿ ಅಂಶ!


ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ತಾಲೂಕಿಗೆ ಪ್ರಥಮ:
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ದೃನ್ಯಾ 622 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಜ್ಞಾನಭಾರತೀ ವಿದ್ಯಾಕೇಂದ್ರದ ಸಿರಿ ಅವಧಾನಿ 621 ಹಾಗೂ ಧನುಷ್ 621 ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

2024-25ನೇ ಸಾಲಿನ ಎಸ್. ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್(ಪ್ರೌಢಶಾಲಾ ವಿಭಾಗ) ಬೇಗಾರು ಈ ಬಾರಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮತ್ತೊಮ್ಮೆ ಶೇಕಡಾ 100% ಫಲಿತಾಂಶ ಪಡೆದು ಗುಣಾತ್ಮಕತೆಯಲ್ಲಿ A ಶ್ರೇಣಿ ಹಾಗೂ ಅತೀ ಹೆಚ್ಚು ವಿಶಿಷ್ಠ ಶ್ರೇಣಿಯೊಂದಿಗೆ ತಾಲ್ಲೂಕಿಗೆ ಅತ್ಯುತ್ತಮ ಸ್ಥಾನ ಪಡೆದ ಸರಕಾರಿ ಶಾಲೆಯಾಗಿದೆ.
1. ಧನ್ಯ ಹೆಚ್ ಜಿ 620
2. ನಿಖಿತಾ ಕೆ. ಎಸ್ 605
3. ನಿರೀಕ್ಷಾ ಕೆ. ಎ 594
4. ಭವಿಷ್ಯ ಹೆಚ್. ಆರ್ 581
5. ಸುವೀಕ್ಷಾ ಎಂ. ಯು 570
6. ದಿವ್ಯ ಹೆಚ್. ಎಂ 569
7. ಇಂಪನಾ ಎಮ್. ಯು 568
8. ಅಶ್ಮಿತಾ 566
9. ಪೂರ್ವಿಕಾ 561
10. ಆದಿತ್ಯ ಡಿ ಶೆಟ್ಟಿ 558
11. ಪ್ರಣಮ್ ಕೆ. ಎಸ್ 549
12. ರಾಫಿಯಾ ಬಿ. ಆರ್ 544
13. ಪೃಥ್ವಿ ಎ ಆರ್ 543
14. ಸಾನಿಕ್ ಹೆಚ್ ಎಸ್ 537
15. ನಾಗ ಲಕ್ಷ್ಮಿ ಎಸ್ 524
16. ಮಹಿಮಾ ಅಂಜುಂ 520
17. ರಿಹಾನ್ ಆರ್ 514
18. ಗಮನಿ 512
19. ನಿಖಿತಾ ಪಿ 512
20. ಸ್ನೇಹಾ ಬಿ.ಸಿ 502
21. ನಾಗಭೂಷಣ ಕೆ. ಎಸ್ 502
22. ಸುಮಿತ್ ಕೆ. ಎನ್ 500

2024-25ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ )ಬೇಗಾರು ಇಲ್ಲಿಯ ವಿದ್ಯಾರ್ಥಿನಿ 620 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದ ಹೊಳೆಗದ್ದೆ ಶ್ರೀಮತಿ ಮಾಲಿನಿ ಗೋಪಾಲ ಕೃಷ್ಣ ದಂಪತಿಗಳ ಪುತ್ರಿ ಕುಮಾರಿ ಧನ್ಯ H G ಇವರನ್ನು ಶಾಲೆಯ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:8;
brp_del_th:0.0040,0.0000;
brp_del_sen:0.1000,0.0000;
motionR: null;
delta:null;
bokeh:0;
module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 208.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 41;

ಈ ಸಂಧರ್ಭದಲ್ಲಿ ಶಾಲಾ ಅಧ್ಯಕ್ಷರಾದ ಸತ್ಯನಾರಾಯಣ ಹೆಚ್. ಆರ್, ಬೇಗಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮೀಶ್,
ಎಸ್.ಡಿ.ಎಮ್.ಸಿ ಸದಸ್ಯರಾದ ಶಿವಾನಂದ ಕಾಮತ್, ಅನಿಲ್ ಏನ್. ಕೆ, ರಾಘವೇಂದ್ರ.ಡಿ. ಕೆ, ಶ್ರೀಮತಿ ಪ್ರತಿಮಾ, ಹಾಗೂ ಶಾಲಾ ಮುಖ್ಯಶಿಕ್ಷಕರಾದ ಚಂದ್ರೇಗೌಡ.ಎಮ್ ಸಹಶಿಕ್ಷಕರಾದ ಸಂತೋಷ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಇದನ್ನೂ ಓದಿ: ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್; ಏನಿದು?


ಕೊಪ್ಪ ತಾಲೂಕಿನ 10 ಶಾಲೆಗಳು ಶೇ.100ರಷ್ಟು ಸಾಧನೆ:
ಕೊಪ್ಪ: ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ 1,039 ವಿದ್ಯಾರ್ಥಿಗಳ ಪೈಕಿ 938 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೊಪ್ಪ ತಾಲೂಕು ಶೇ.90.28 ರಷ್ಟು ಫಲಿತಾಂಶ ಪಡೆದಿದೆ. 517 ಬಾಲಕರ ಪೈಕಿ 450, 522 ಬಾಲಕಿಯರ ಪೈಕಿ 488 ಉತ್ತೀರ್ಣರಾಗಿದ್ದಾರೆ. ತಾಲೂಕಿನಲ್ಲಿ 29 ಪ್ರೌಢಶಾಲೆಗಳಿದ್ದು, 10 ಶಾಲೆಗಳು 100ಕ್ಕೆ 100ರಷ್ಟು ಫಲಿತಾಂಶ ದಾಖಲಿಸಿದೆ. 5 ಸರ್ಕಾರಿ ಶಾಲೆಗಳು ನೂರರಷ್ಟು ಫಲಿತಾಂಶ ದಾಖಲು ಮಾಡಿವೆ. ಬೊಮ್ಮಲಾಪುರ, ನಿಲುವಾಗಿಲು, ಲೋಕನಾಥಪುರ, ಸಿದ್ದರಮಠ ಹಾಗೂ ಬಪ್ಪುಂಜಿಯ ಸರ್ಕಾರಿ ಪ್ರೌಢಶಾಲೆ, ಅನುದಾನ ರಹಿತ ಶಾಲೆಗಳಾದ ಜ್ಞಾನ ವಾಹಿನಿ ಶಿಕ್ಷಣ ಸಂಸ್ಥೆ, ಶಾರದ ವಿದ್ಯಾಮಂದಿರ, ಸದ್ಗುರು ಅಂಗ್ಲ ಮಾಧ್ಯಮ ಶಾಲೆ, ಬಸರೀಕಟ್ಟೆ, ಭಾರತೀಯ ಕಾಫಿ ವಿದ್ಯಾಲಯ ಸಿಆರ್‌ಎಸ್ ಹಾಗೂ ಮೊರಾರ್ಜಿ ದೇಸಾಯಿ ವಸತಿ, ಹರಂದೂರು ಶಾಲೆಯು 100ರಷ್ಟು ಫಲಿತಾಂಶ ಗಳಿಸಿದೆ.

ವೆಂಕಟೇಶ್ವರ ವಿದ್ಯಾ ಮಂದಿರ ಶಾಲೆ ವಿದ್ಯಾರ್ಥಿನಿ ಕೊಪ್ಪ ತಾಲೂಕಿಗೆ ಪ್ರಥಮ:
ಕೊಪ್ಪ ಪಟ್ಟಣದ ಹೊರವಲಯದಲ್ಲಿರುವ ವೆಂಕಟೇಶ್ವರ ವಿದ್ಯಾ ಮಂದಿರ ಶಾಲೆ ವಿದ್ಯಾರ್ಥಿನಿ ರಕ್ಷಾ ಆರ್. ಶೆಟ್ಟಿ 621 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: ಈ 3 ರಾಶಿಯವರಿಗೆ ಜೀವನಕ್ಕೊಂದು ತಿರುವು ಸಿಗೋದು ಗ್ಯಾರಂಟಿ


ಶ್ರೀ ಸದ್ಗುರು ವಿದ್ಯಾಮಂದಿರ ಶೇ.100 ರಷ್ಟು ಫಲಿತಾಂಶ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೀ ಸದ್ಗುರು ವಿದ್ಯಾಮಂದಿರ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಶಾಲೆ 17 ವರ್ಷಗಳಿಂದ ಸತತವಾಗಿ ಶೇ.100 ಫಲಿತಾಂಶ ಪಡೆಯುತ್ತಿದೆ. 14 ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿ, 8 ವಿದ್ಯಾರ್ಥಿಗಳು 600ಕ್ಕಿಂತಲೂ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ತಪಸ್ವಿನಿ 620 ಅಂಕ ಪಡೆದರೆ, ಮುನ್ನೂರುಪಾಲ್‌ನ ಪ್ರತೀತ್ 615. ಅಂಕ ಪಡೆದಿದ್ದಾರೆ.

ಜಯಪುರ ಬಿಜಿಎಸ್ʼಗೆ ಶೇ.96.66 ಫಲಿತಾಂಶ:
ಜಯಪುರ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.96.66 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 11 ಅತ್ಯುನ್ನತ ಶ್ರೇಣಿ, 17 ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆತ್ಮಿಕಾ ಜೈನ್ 610, ವೈಷ್ಣವಿ, 597, ಏಂಜಲ್, 591 ಅಂಕ ಪಡೆದಿದ್ದಾರೆ.


ಇದನ್ನೂ ಓದಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; ಪ್ರತಿ ರೈತನ ಖಾತೆಗೆ 6000 ರೂ. ನೆರವು, ಅರ್ಜಿ ಸಲ್ಲಿಕೆ ಹೇಗೆ?


ಬಾಳೆಹೊನ್ನೂರು ಬಿಜಿಎಸ್ʼಗೆ ಶೇ.100 ಫಲಿತಾಂಶ:
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಬಿಜಿಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಡಾ. ವೈ.ಎ.ಸುರೇಶ್‌ ತಿಳಿಸಿದ್ದಾರೆ. 10 ವಿದ್ಯಾರ್ಥಿಗಳು ಎ+, 6 ವಿದ್ಯಾರ್ಥಿಗಳು ಎ, 4 ವಿದ್ಯಾರ್ಥಿಗಳು ಬಿ+, ಓರ್ವ ವಿದ್ಯಾರ್ಥಿ ಸಿ+, ಓರ್ವ ವಿದ್ಯಾರ್ಥಿ ಸಿ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಎಚ್.ಯು.ಮಿನುಗು 618 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.