ಶೃಂಗೇರಿಯ ಗಾಂಧಿ ಮೈದಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸರ್ಕಸ್ ಅಂಗಡಿ ತೆರೆಯಲು ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಈ ಸರ್ಕಸ್ ಅಂಗಡಿ ಮಾಲೀಕರಿಗೆ ಅನುಮತಿ ದೊರೆಯದೆ ಪರದಾಡುವಂತಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಶೋಗೆ ಫೈನಲ್ ಆದ 18 ಸ್ಪರ್ಧಿಗಳು ಇವರೇ?

ಕಳೆದ ವರ್ಷ ಗಾಂಧಿ ಮೈದಾನದಲ್ಲಿ ಮನರಂಜನೆಯ ಸರ್ಕಸ್‌ಗೆ ಜಾಗದ ಅನುಮತಿಗಾಗಿ ಟೆಂಡರ್ ಪ್ರಕ್ರಿಯೆ ಅನುಸರಿಸಿದ್ದು, ಸುಮಾರು 7 ಲಕ್ಷ ರೂ ಪಪಂಗೆ ಲಾಭ ತಂದುಕೊಟ್ಟಿತ್ತು ಎನ್ನಲಾಗುತ್ತಿದೆ. ಈ ಬಾರಿ ಸರ್ಕಸ್ ಅಂಗಡಿ ಮಾಲೀಕರು ಅನುಮತಿಗಾಗಿ ಮುಂದಾಗಿದ್ದು, ಇದುವರೆಗೂ ಅನುಮತಿ ದೊರೆಯದೆ ಪರದಾಡುವಂತಾಗಿದೆ. ಆದರೆ, ಸರ್ಕಸ್ ಮಾಲೀಕರು ಅನಧಿಕೃತವಾಗಿ ಸರ್ಕಸ್ ಆರಂಭಿಸಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ಅರಣ್ಯ ಭೂಮಿ ಒತ್ತುವರಿ ತೆರವಿಗೆ SIT ರಚಿಸಿ ಆದೇಶ
ಇನ್ನು ಸರ್ಕಸ್ ಆರಂಭಿಸಲು ಯಾರಿಂದಲೂ ವಿರೋಧ ಬಾರದಿದ್ದರೆ ಸರ್ಕಸ್ ನಡೆಸಲಿ ಎಂದು ಕ್ಷೇತ್ರದ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ. ಅನುಮತಿ ನೀಡದೆ ಸರ್ಕಸ್ ನಡೆದು ನಾಳೆ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: 10th ಪಾಸ್ ಆದವರಿಗೆ ಜಾಬ್ ಆಫರ್; 23.000 ಸಂಬಳ












