ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸುವರ್ಣ ಭಾರತೀ ಮಹೋತ್ಸವದ ಅಂಗವಾಗಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ಹಾಗೂ ಶ್ರೀ ಜೆ.ಸಿ.ಬಿ.ಎಂ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಭಾಗಿತ್ವದೊಂದಿಗೆ ಮಧುಮೇಹ ಜಾಗೃತಿ ಶಿಬಿರ ಇಂದು ನಡೆಯಿತು.
ಇದನ್ನೂ ಓದಿ; ರೇಷನ್ ಕಾರ್ಡ್ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್ ಡೇಟ್ ಯಾವಾಗ ಗೊತ್ತಾ? ಇಲ್ಲಿದೆ ನೋಡಿ

ಜೆ.ಸಿ.ಬಿ.ಎಂ ಕಾಲೇಜಿನ ಡಾ|| ಟಿ. ಎಂ. ಎ. ಪೈ ಸಭಾಂಗಣದದಲ್ಲಿ, ವೇದ ಬ್ರಹ್ಮಶ್ರೀ ದಕ್ಷಿಣಾಮೂರ್ತಿ ಹಾಗೂ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಶೃಂಗೇರಿ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ।। ಸುಹಾಸ್ ಹೆಚ್ ಡಿ ಪ್ರಾಸ್ತಾವಿಕ ನುಡಿದರು.

ಇದನ್ನೂ ಓದಿ; ರಾಜ್ಯದಲ್ಲಿ DL, RC ಸ್ಮಾರ್ಟ್ ಕಾರ್ಡ್ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
ಇನ್ನು ಮಧುಮೇಹ ಜಾಗೃತಿ ಶಿಬಿರದಲ್ಲಿ ಬದಲಾದ ಜೀವನ ಶೈಲಿ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು, ಮಧುಮೇಹದ ನಿರ್ವಹಣೆ ಹಾಗೂ ಬಾರದಂತೆ ತಡೆಯುವಲ್ಲಿ ಆಯುರ್ವೇದದ ಮಹತ್ವ ಹಾಗೂ ಸೂಕ್ತ ರೀತಿಯ ಆಹಾರ ಕ್ರಮ ಜೀವನ ಕ್ರಮದ ಬಗ್ಗೆ ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ ಉಚಿತ ಮಧುಮೇಹ ಪರೀಕ್ಷೆ ಹಾಗೂ ಮಧುಮೇಹ ನಿಯಂತ್ರಣಕ್ಕೆ ಸೂಕ್ತ ಆಯುರ್ವೇದ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.

ಇದನ್ನೂ ಓದಿ; ಆಸ್ತಿ ಮಾಲೀಕರಿಗೆ ಹೊಸ ಆದೇಶ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಈ ಸಂದರ್ಭದಲ್ಲಿ ಪುಪ್ಷ ಲಕ್ಷ್ಣೀನಾರಾಯಣ್, ಡಾ।। ಕೇಶವ ಡಿ ವಿ, ಎ.ಎಲ್.ಎನ್ ರಾವ್, ರಂಗನಾಥನ್, ತ್ಯಾಗರಾಜ್ ಇದ್ದರು.
ಇದನ್ನೂ ಓದಿ; ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್












