ಹಿಂದುಗಳು ಒಗ್ಗೂಡಿದಾಗ ಮಾತ್ರ ದೇಶ ಸದೃಢ: ಶ್ರೀಕಾಂತ್ ಶೆಟ್ಟಿ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದತ್ತಮಾಲಾ ಅಭಿಯಾನ, ಶ್ರೀ ಗುರು ದತ್ತಾತ್ರೇಯರ ಜಯಂತಿ ಅಂಗವಾಗಿ ಇಂದು ಶೃಂಗೇರಿಯಲ್ಲಿ ಜಾಗೃತ ಹಿಂದೂ ಸಮಾವೇಶ ಸಭಾ ಕಾರ್ಯಕ್ರಮ ನಡೆಯಿತು.

ದತ್ತಮಾಲಾ ಧಾರಣೆ ಮಾಡಿದ್ದ ನೂರಾರು ಸಂಖ್ಯೆಯ ದತ್ತ ಭಕ್ತರು ಶೃಂಗೇರಿಯ ಶಂಕರಾಚಾರ್ಯ ವೃತ್ತದಿಂದ ಆರಂಭಿಸಿದ ಬೃಹತ್ ಶೋಭಾಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಈ ನಂತರ ಆರಂಭವಾದ ಜಾಗೃತ ಹಿಂದೂ ಸಮಾವೇಶದ ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಮುಖರಾದ ಶ್ರೀಕಾಂತ್ ಶೆಟ್ಟಿಯವರು ನಡೆಸಿದರು. ಹಿಂದೂಗಳು ಒಗ್ಗೂಡಿದಾಗ ಮಾತ್ರ ಐಕ್ಯತೆಯ ಮೂಲಕ ದೇಶವನ್ನು ಸದೃಢಗೊಳಿಸಬಹುದು. ಪಕ್ಕದ ಮನೆಯಲ್ಲಿ ಮಾತ್ರ ಭಗತ್ ಸಿಂಗ್ ರಂತಹ ಯುಗಪುರುಷರು ಜನಿಸಬೇಕೆಂದು ಎಲ್ಲರೂ ಹೇಳುತ್ತಾರೆ ತಮ್ಮ ಮನೆಯಲ್ಲಿ ಅಂತಹವರು ಬೇಕೆಂದು ಹೇಳದೇ ಇರುವ ಮಟ್ಟಕ್ಕೆ ಈಗಿನ ಹಿಂದೂಗಳ ಮನಸ್ಥಿತಿ ತಲುಪಿದೆ. ಧ್ವನಿ ಎತ್ತದ ಹಿಂದೂಗಳಿಂದಲೇ ಹಿಂದೂ ಧರ್ಮಕ್ಕೆ ಅಪಾಯ ಕಾಡುತ್ತಿದೆ ಎಂದರು.

ಆಮಿಷಗಳನ್ನು ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಇನ್ನೊಂದು ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳ ಸಂಬಳಕ್ಕೆ ಕೂಡ ಕುತ್ತು ಬರುವ ಸಾಧ್ಯತೆಯಿದೆ ಈ ಸರ್ಕಾರದಿಂದ ನಮಗೆ ಏನೂ ನಿರೀಕ್ಷೆಯಿಲ್ಲ ಎಂದು ಕಿಡಿಕಾರಿದರು. ಬಜರಂಗದಳದ ಹುಟ್ಟು ಸಂಘರ್ಷದಿಂದಲೇ, ಇತರರು ನೀಡುವ ಏಟಿಗೆ ಪ್ರತ್ಯುತ್ತರ ನೀಡಲು ಸಂಘಟನೆಯ ಕಾರ್ಯಕರ್ತರು ಸಿದ್ಧರಿದ್ದಾರೆ. ದೇಶ ವಿರೋಧಿ ಕೃತ್ಯ ಮಾಡುವವರ ವಿರುದ್ಧ ನಾವು ಸಿಡಿದು ನಿಲ್ಲುತ್ತೇವೆ ಎಂದರು.

ವೇದಿಕೆಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕರಾದ ಅಜಿತ್ ಕುಲಾಲ್, ವಿ.ಹಿ.ಪ ನ ಜಿಲ್ಲಾಧ್ಯಕ್ಷರಾದ ಕೆ.ಪಿ ಸುರೇಶ್ ಕುಮಾರ್, ಅಧ್ಯಕ್ಷತೆ ವಹಿಸಿದ್ದ ಡಾ. ಉರಾಳ್ ಎಂ.ವಿ, ವಿ.ಹಿ.ಪ ಜಿಲ್ಲಾ ಕಾರ್ಯದರ್ಶಿ ದಿವಿರ್ ಮಲ್ನಾಡ್, ತಾಲೂಕು ಸಂಚಾಲಕ ನಾಗೇಶ್ ಶೆಟ್ಟಿ, ದುರ್ಗಾ ವಾಹಿನಿ ಅಧ್ಯಕ್ಷೆ ಶಿಲ್ಪಾ ಮಂಜುನಾಥ್ ಇದ್ದರು.

ಗಮನಿಸಿ: ಕೊಪ್ಪ ಭಾಗದಲ್ಲಿ ನಾಳೆ ಕರೆಂಟ್ ಇರಲ್ಲ!

ಕೊಪ್ಪ: ಕೊರಡಿಹಿತ್ತು ನಲ್ಲಿರುವ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಒಂದು ದಿನ ವಿದ್ಯುತ್ ನಿಲುಗಡೆಯಾಗಲಿದೆ.

26.12.2023 (ಮಂಗಳವಾರ) ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆವರೆಗೆ ಕೊರಡಿಹಿತ್ತು 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಕೊರಡಿಹಿತ್ತು. ಹೊಸೂರು. ಮೇಲ್ಪಾಲ್, ಕಟ್ಟಿನಮನೆ ಫೀಡರ್ ಗಳಿಂದ ವಿದ್ಯುತ್ ಸರಬರಾಜು ಆಗುವ ಕೊರಡಿಹಿತ್ತು, ಬೇರುಕೋಡಿಗೆ, ದೇವನ್, ಹೊಸೂರು, ಮೇಲ್ಟಾಲ್, ಕರ್ಕೇಶ್ವರ, ಗುಟ್ಟೂರು, ಹುಣಸೆಕೊಪ್ಪ, ಕಟ್ಟಿನಮನೆ, ಕೆರೆಮನೆ, ಜೋಗಿಮಕ್ಕಿ, ಇಸ್ಮಿಲ್ಲಾ ಎಸ್ಟೇಟ್, ಬಿಳುವ, ದಂಡಿನ್‌ಮಕ್ಕಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.