ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊರಡಿಹಿತ್ತು ನಲ್ಲಿರುವ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಒಂದು ದಿನ ವಿದ್ಯುತ್ ನಿಲುಗಡೆಯಾಗಲಿದೆ.
ಇದನ್ನೂ ಓದಿ; ರಾಜ್ಯದ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ; 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಗೆ ಮರುಚಾಲನೆ

26.12.2023 (ಮಂಗಳವಾರ) ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆವರೆಗೆ ಕೊರಡಿಹಿತ್ತು 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಕೊರಡಿಹಿತ್ತು. ಹೊಸೂರು. ಮೇಲ್ಪಾಲ್, ಕಟ್ಟಿನಮನೆ ಫೀಡರ್ ಗಳಿಂದ ವಿದ್ಯುತ್ ಸರಬರಾಜು ಆಗುವ ಕೊರಡಿಹಿತ್ತು, ಬೇರುಕೋಡಿಗೆ, ದೇವನ್, ಹೊಸೂರು, ಮೇಲ್ಟಾಲ್, ಕರ್ಕೇಶ್ವರ, ಗುಟ್ಟೂರು, ಹುಣಸೆಕೊಪ್ಪ, ಕಟ್ಟಿನಮನೆ, ಕೆರೆಮನೆ, ಜೋಗಿಮಕ್ಕಿ, ಇಸ್ಮಿಲ್ಲಾ ಎಸ್ಟೇಟ್, ಬಿಳುವ, ದಂಡಿನ್ಮಕ್ಕಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಚಿಕ್ಕಮಗಳೂರು: ದತ್ತಜಯಂತಿ ಆರಂಭದಲ್ಲೇ ಪೊಲೀಸರು ಹಾಗೂ ದತ್ತಭಕ್ತರ ನಡುವೆ ಕಾದಾಟ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿಗೆ ಕಾನೂನು ಸುವ್ಯಸ್ಥೆ ಕಾಪಾಡಿಕೊಂಡು ಶಾಂತಿಯುತ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ 4000 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೆ ಇದೀಗ ಸಾವಿರಾರು ಜನ ಪೊಲೀಸರನ್ನ ನಿಯೋಜಿಸಿರುವುದೇ ಕಾದಾಟಕ್ಕೆ ಕಾರಣವಾಗಿದೆ.
ಹೌದು, ಇಂದು ನಗರದಲ್ಲಿ ಸಂಕೀರ್ತನಾ ಯಾತ್ರೆ ನಂತರ ಅನುಸೂಯ ದೇವಿ ಪೂಜೆಗೆಂದು ದತ್ತಪೀಠಕ್ಕೆ ತೆರಳುವ ವೇಳೆ ಪೊಲೀಸರು ಹಾಗೂ ವಿಶ್ವ ಹಿಂದು ಪರಿಷತ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಅವರ ವಾಹನವನ್ನು ಹತ್ತಾರು ಕಡೆ ತಡೆದು ತಪಾಸಣೆ ನಡೆಸಲಾಯಿತು. ಕೊನೆಯಲ್ಲಿ ದತ್ತಪೀಠ ಮುಖ್ಯ ದ್ವಾರದಲ್ಲೂ ತಡೆದು ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಎಷ್ಟು ಬಾರಿ ತಡೆಯುತ್ತಿರಾ ಎಂದು ಕೆಳಗಿಳಿದು ತಾವೇ ಬ್ಯಾರಿಕೇಡ್ ಎಳೆದು ಇಲ್ಲೇ ಕುಳಿತುಕೊಳ್ಳುತ್ತೇವೆ ಬಿಡಿ ಎಂದಾಗ ಪೊಲೀಸರು ದತ್ತಭಕ್ತರ ನಡುವೆ ಮಾತಿನ ಚಕಮಕಿ ವಾಗ್ವಾದವೇ ನಡೆಯಿತು. ಈ ವೇಳೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಸಹಾ ವಿ.ಎಚ್.ಪಿ ಭಜರಂಗದಳ ಕಾರ್ಯಕರ್ತರು ಮುಂದಾದರು.
ಪಿಎಸ್ಐ ಅಮಾನತ್ತಿಗೆ ಒತ್ತಾಯ:
ಮುಖ್ಯದ್ವಾರದಲ್ಲಿ ವಾಹನ ತಡೆದ ಪಿಎಸ್ ಐ ಮುರಳಿಧರ್ ಅಮಾನತ್ತಿಗೆ ಒತ್ತಾಯಿಸಿ ಎಸ್ಪಿಗೆ ದೂರು ನೀಡಿತ್ತೇವೆ ಎಂದ ವಿಎಚ್.ಪಿ ಮುಖಂಡರು ಹೇಳಿದರು. ಸಾವಿರಾರು ಜನ ಪೊಲೀಸರ ನಿಯೋಜಿಸಿ ವ್ಯಾಪಕ ಬಂದೋಬಸ್ತ್ ಮಾಡಿರುವುದಕ್ಕೆ ದತ್ತಭಕ್ತರು ಆಕ್ರೋಶ ವ್ಯಕ್ತಪಡಿಸಿದರು.












