ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನದಲ್ಲಿ ಶೃಂಗೇರಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ನಿಂದ ಜನವರಿ 20 ರಂದು ಶ್ರೀ ರುದ್ರ ಪಾರಾಯಣ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ; ರೈತರೇ ಗಮನಿಸಿ; PM KISAN ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ

ಶ್ರೀ ರಾಮನ ಜನನಕ್ಕೆ ಕಾರಣವಾದ ದಶರಥ ಮಹಾರಾಜರು ಋಷ್ಯ ಶೃಂಗ ಮುನಿಗಳಿಂದ “ಪುತ್ರಕಾಮೇಷ್ಟಿ ಯಾಗ” ನಡೆಸಿ ಅದರಿಂದ ಸಿಕ್ಕ ಪ್ರಸಾದ ರೂಪದ ಪಾಯಸ ಸೇವಿಸಿ ಕೌಸಲ್ಯ, ಸುಮಿತ್ರೆ ಮತ್ತು ಕೈಕೇಯಿ ದೇವಿ ಗರ್ಭ ಧರಿಸಿದ ವಿಷಯ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಋಷ್ಯ ಶೃಂಗ ಮಹಾ ಮನಿಗಳು ಶೃಂಗೇರಿ ಸಮೀಪದ ಕಿಗ್ಗದ ನರಸಿಂಹ ಪರ್ವತದಲ್ಲಿ ವಾಸವಾಗಿದ್ದು. ಇಂದಿಗೂ ಮಳೆ ಪುತ್ರ ಸಂತಾನ ಹಾಗೂ ವಿವಾಹ ಪ್ರಾಪ್ತಿಗಾಗಿ ಪ್ರಸಿದ್ಧವಾಗಿದೆ.
ಇದನ್ನೂ ಓದಿ; ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ
20/01/2023 ಶನಿವಾರ ಬೆಳಗ್ಗೆ 8 ಗಂಟೆಗೆ ಋಷ್ಯಶೃಂಗರು ತಪಸ್ಸು ಆಚರಿಸಿದ ತಪೋಭೂಮಿ ನರಸಿಂಹ ಪರ್ವತಕ್ಕೆ ರಾಮ ಸಂಕೀರ್ತನ ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಚಿಕ್ಕಮಗಳೂರು: ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಆರೋಪಿ ಮತ್ತೆ ಪೊಲೀಸ್ ವಶಕ್ಕೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಎಂ ಕೆ ಪೂರ್ಣೇಶ್ ಎಸ್ಕೇಪ್ ಆಗಿದ್ದ, ಈ ಸಂಬಂಧ ಇದೀಗ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಏನಿದು ಘಟನೆ:
ಕಳೆದ ನವೆಂಬರ್ ನಲ್ಲಿ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ, ಆತನ ಕಾಲಿನ ಮಂಡಿಗೆ ಫೈರಿಂಗ್ ಮಾಡಿದ್ದರು. ಫೈರಿಂಗ್ ವೇಳೆ ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಮೂರು ದಿನಗಳ ಹಿಂದೆ ನಗರದ ಮಲ್ಲೇಗೌಡ ಆಸ್ಪತ್ರೆಯಿಂದ ಮುಂಜಾನೆ ಎಸ್ಕೇಪ್ ಆಗಿದ್ದ.
ಎಸ್ಕೇಪ್ ಆಗಿದ್ದ ಆರೋಪಿ ಪೂರ್ಣೇಶ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿ, ಇಂದು ಬೆಳಗ್ಗೆ 6:30 ಗಂಟೆ ಸಮಯದಲ್ಲಿ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮಾಗಲ ಬ್ರಿಡ್ಜ್ ಕಡೆಯಿಂದ ಮಾಗಲಬಸ್ ನಿಲ್ದಾಣದ ಕಡೆ ಬರುತ್ತಿರುವಾಗ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ; ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ












