ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) 2023 ನೇ ಸಾಲಿನ ಮಹಾತ್ಮ ಜ್ಯೋತಿಬಾಪುಲೆ ರಾಷ್ಟ್ರೀಯ ಪುರಸ್ಕಾರವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಜಾವಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನೇಶ ಡಿ.ಎಸ್ ಇವರಿಗೆ ಲಭಿಸಿದೆ.
ಇದನ್ನೂ ಓದಿ; ರೈತರೇ ಗಮನಿಸಿ; PM KISAN ನೋಂದಣಿ ಸಂಖ್ಯೆ ಮರೆತಿದ್ರೆ ಜಸ್ಟ್ ಹೀಗೆ ತಿಳಿಯಿರಿ

ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಭವನ ಬೆಂಗಳೂರಿನಲ್ಲಿ ನಡೆದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಶ್ರೀ ಸಾವಿತ್ರಿಬಾಯಿ ಪುಲೆ ಜಯಂತಿಯ ಸ್ಮರಣಾರ್ಥ ನಾಡಿನ ಸಮಾಚಾರ ಸೇವಾ ಸಂಘ ಮತ್ತು ನಾಡಿನ ಸಮಾಚಾರ ದಿನಪತ್ರಿಕೆ ಸೇವಾ ಬಳಗ ಗೋಕಾಕ್ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಮಾರಂಭದಲ್ಲಿ ದಿನೇಶ ಡಿ .ಎಸ್ ಇವರಿಗೆ 2023 ನೇ ಸಾಲಿನ ಮಹಾತ್ಮ ಜ್ಯೋತಿಬಾಪುಲೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ
ಚಿಕ್ಕಮಗಳೂರು: ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಆರೋಪಿ ಮತ್ತೆ ಪೊಲೀಸ್ ವಶಕ್ಕೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಎಂ ಕೆ ಪೂರ್ಣೇಶ್ ಎಸ್ಕೇಪ್ ಆಗಿದ್ದ, ಈ ಸಂಬಂಧ ಇದೀಗ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಏನಿದು ಘಟನೆ:
ಕಳೆದ ನವೆಂಬರ್ ನಲ್ಲಿ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ, ಆತನ ಕಾಲಿನ ಮಂಡಿಗೆ ಫೈರಿಂಗ್ ಮಾಡಿದ್ದರು. ಫೈರಿಂಗ್ ವೇಳೆ ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಳೆದ ಮೂರು ದಿನಗಳ ಹಿಂದೆ ನಗರದ ಮಲ್ಲೇಗೌಡ ಆಸ್ಪತ್ರೆಯಿಂದ ಮುಂಜಾನೆ ಎಸ್ಕೇಪ್ ಆಗಿದ್ದ.
ಆರೋಪಿಯ ಪತ್ತೆಗೆ ಪೊಲೀಸರ ಶೋಧ:
ಎಸ್ಕೇಪ್ ಆಗಿದ್ದ ಆರೋಪಿ ಪೂರ್ಣೇಶ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿ, ಇಂದು ಬೆಳಗ್ಗೆ 6:30 ಗಂಟೆ ಸಮಯದಲ್ಲಿ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮಾಗಲ ಬ್ರಿಡ್ಜ್ ಕಡೆಯಿಂದ ಮಾಗಲಬಸ್ ನಿಲ್ದಾಣದ ಕಡೆ ಬರುತ್ತಿರುವಾಗ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ; ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವನ್ಯಜೀವಿ ಅಂಗಾಂಗಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ
ಇನ್ನು ಈ ಕಾರ್ಯಾಚಾರಣೆಯಲ್ಲಿ ಕೊಪ್ಪ ಉಪ ವಿಭಾಗದ ಬಾಳೆಹೊನ್ನೂರು ಠಾಣೆ ಪಿಎಸ್ ಐ ದಿಲೀಪ್ ಕುಮಾರ್, ಜಯಪುರ ಠಾಣೆ ಪಿಎಸ್ ಐ ಗುರು ಎ ಸಜ್ಜನ್ ಹಾಗೂ ಸಿಬ್ಬಂದಿಗಳು ಇದ್ದರು.












