ಶೃಂಗೇರಿ ತಾಲೂಕಿನ ಆಹಾರ ಪಡಿತರ ಚೀಟಿಯಲ್ಲಿ ವ್ಯತ್ಯಯ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 1,000 ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ದಾರರ ಆದಾಯ ಹೆಚ್ಚಿದೆ ಎಂದು ತಪ್ಪು ಮಾಹಿತಿ ನಮೂದಿಸಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಭಾರತ್ ವೇದಿಕೆ ವತಿಯಿಂದ ಶೃಂಗೇರಿ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಲಾಯಿತು..


ಇದನ್ನೂ ಓದಿ: ಆದಿತ್ಯ ಬಿರ್ಲಾ ಕ್ಯಾಪಿಟಲ್ ವತಿಯಿಂದ ವಿದ್ಯಾರ್ಥಿವೇತನ; 9 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್


ಬಡ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ದಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಸೌಲಭ್ಯವನ್ನು ಪಡೆಯಲು ಬೇಕಾಗುತ್ತದೆ. ಆದರೆ, ಶೃಂಗೇರಿ ತಾಲ್ಲೂಕಿನ ಹಲವಾರು ಬಡ ಕೂಲಿ ಕಾರ್ಮಿಕರ ಹಾಗೂ ಸಣ್ಣ ರೈತರ ಕುಟುಂಬದ ವಾರ್ಷಿಕ ಆದಾಯ 1,20,000/- ರೂ ಹೆಚ್ಚಾಗಿರುತ್ತದೆಂದು ತಪ್ಪಾಗಿ ಮಾಹಿತಿ ನಮೂದಿಸಿದ್ದು, ಇದರಿಂದ ಸುಮಾರು 1,000 ಕ್ಕೂ ಹೆಚ್ಚು ಕುಟುಂಬಗಳ ಬಿ.ಪಿ.ಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಭಾರತ್ ವೇದಿಕೆ ವತಿಯಿಂದ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದರು.


ಇದನ್ನೂ ಓದಿ:  ಗೃಹಲಕ್ಷ್ಮಿ ಯೋಜನೆಯ 2000 ಹಣ ಕುರಿತು ಬಿಗ್ ಅಪ್ಡೇಟ್; ಯಜಮಾನಿಯರ ಗೃಹಲಕ್ಷ್ಮಿ ಖಾತೆ ಡಿಲೀಟ್ ಆಗಿದೆಯೋ? ಇಲ್ಲವೋ ಸ್ಪಷ್ಟನೆ ನೀಡಿದ ಸಚಿವೆ; ಇಲ್ಲಿದೆ ನೋಡಿ ಸ್ಪಷ್ಟನೆ


ಸೊಸೈಟಿಯವರು ಕೇವಲ ಪಡಿತರದ ಕಮಿಷನ್ ಪಡೆದು ಕೂರುವುದಲ್ಲ, ಈ ಬಗ್ಗೆಯೂ ಗಮನಹರಿಸಿ ಜನರಿಗೆ ಮಾಹಿತಿ ಒದಗಿಸುವ ಕೆಲಸ ಮಾಡಬೇಕು, ಇನ್ನು ಈ ಬಗ್ಗೆ ಬಹುತೇಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ವಿಷಯದ ಗಂಭೀರತೆಯೇ ತಿಳಿದಿಲ್ಲ, ತಮ್ಮ ಹೊಣೆಗೇಡಿತನದಿಂದ ನಾಳೆಯ ದಿನ ಕಾರ್ಮಿಕರು, ರೈತರ ಕುಟುಂಬಗಳ ಸಂಕಷ್ಟಕ್ಕೀಡಾಗುತ್ತವೆ. ನಮಗೆ 300 ಕಾರ್ಡ್ ಎಂಬ ಮಾಹಿತಿ ಇತ್ತು ಆದರೆ ನಾವು ಅಧಿಕಾರಿಗಳನ್ನು ಕೇಳಿದಾಗ ಶೃಂಗೇರಿ ಒಂದರಲ್ಲೇ 1,000 ಕ್ಕೂ ಹೆಚ್ಚಿನ ಕಾರ್ಡ್ ಗಳು ರದ್ದಾಗುವ ಸಂದರ್ಭದಲ್ಲಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಕ್ರಮ ವಹಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಆದರ್ಶ ಕಾಂಚಿನಗರ ಹೇಳಿದರು.

ಈ ಸಂದರ್ಭದಲ್ಲಿ ಆದರ್ಶ ಕಾಂಚಿನಗರ, ಅಶ್ವಿನ್ ಕುಂಚೆಬೈಲು, ನಿರಂಜನ್ ಶೃಂಗೇರಿ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.