ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪಿಕಪ್ ವಾಹನ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದ ಬಳಿ ನಡೆದಿದೆ.


ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದ ಕಾರಣ ತಿರುವಿನಲ್ಲಿ ಗಾಡಿ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಗುಡ್ಡದ ಮರಗಿಡಗಳಿಗೆ ಸಿಲುಕಿ ಕೆಳಗೆ ಬಿದ್ದಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ಸ್ಕಾಲರ್ ಶಿಪ್; ಈಗಲೇ ಅರ್ಜಿ ಸಲ್ಲಿಸಿ













