
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗೃಹ ಇಲಾಖೆಯು 2024ರ ಮುಖ್ಯಮಂತ್ರಿ ಪದಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಒಟ್ಟು 197 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಈ ಬಾರಿ ವಿಶೇಷವಾಗಿ ನಕ್ಸಲ್ ನಿಗ್ರಹ ಪಡೆಯ ಎಲ್ಲಾ ಸದಸ್ಯರಿಗೆ ಕೂಡ ಮುಖ್ಯಮಂತ್ರಿ ಪದಕವನ್ನು ನೀಡಲಾಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಬೆಳೆಹಾನಿ ಪರಿಹಾರ ಹಣ ಬಿಡುಗಡೆ; ಎಷ್ಟು ಪರಿಹಾರ ಬಿಡುಗಡೆ?, ಇಲ್ಲಿದೆ ನೋಡಿ

ಜಿಲ್ಲೆಯಲ್ಲಿ ಐವರಿಗೆ ಮುಖ್ಯಮಂತ್ರಿ ಪದಕ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಮುಖ್ಯಮಂತ್ರಿ ಪೊಲೀಸ್ ಪದಕ ಲಭಿಸಿದೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಛೇರಿಯ ಸಿ.ಬಿ.ಬ್ರಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇಷಾದ್ರಿ ಮತ್ತು ಬಸವರಾಜ್ ಎಂಬುವವರಿಗೆ ಹಾಗೂ ಶೃಂಗೇರಿಯ ಗುಪ್ತಚರ ದಳದ ನವೀನ್ ಮತ್ತು ಕಳಸದ ಗುಪ್ತಚರ ದಳದ ಗೀರಿಶ್ ಹಾಗೂ ಚಿಕ್ಕಮಗಳೂರು ಪೊಲೀಸ್ ಕಂಟ್ರೋಲ್ ರೂಂನ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಸೇವೆ ಸಲ್ಲಿಸಿರುವ ಪ್ರದೀಪ್ ಕುಮಾರ್ ಎಲ್ ಜಿ HC WIR LESS ಈ ಐವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಪ್ರದೀಪ್ ಕುಮಾರ್ ಎಲ್ ಜಿ ಇವರಿಗೆ 2023 ರಲ್ಲಿ ಘೋಷಣೆಯಾದ ಮುಖ್ಯಮಂತ್ರಿ ಪದಕವನ್ನು ಈ ಬಾರಿ ನೀಡಿ ಗೌರವಿಸಲಾಗುತ್ತಿದೆ.
ಇದನ್ನೂ ಓದಿ: ಶಾಲಾ ಶಿಕ್ಷಕರಿಗೆ ವರ್ಗಾವಣೆ ಬಗ್ಗೆ ಆದೇಶ; ಇಲ್ಲಿದೆ ನೋಡಿ ಡಿಟೈಲ್ಸ್
ಎರಡನೇ ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಎ.ಎಸ್.ಐ ಗಿರೀಶ್ ಹಾಗೂ ಗುಪ್ತಚರ ಸಹಾಯಕ ನವೀನ್ ಹೆಚ್:
ಶೃಂಗೇರಿಯಲ್ಲಿ ಹಿರಿಯ ಗುಪ್ತಚರ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ ಹೆಚ್ ಅವರಿಗೆ ಈ ಹಿಂದೆ ನಕ್ಸಲ್ ನಿಗ್ರಹ ಕಾರ್ಯಚರಣೆ ಸಂಬಂದಿಸಿದಂತೆ ವಿಶೇಷ ಕರ್ತವ್ಯಕ್ಕಾಗಿ 2015 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ ದೊರೆತಿದೆ ಇದೀಗ ಎರಡನೇ ಬಾರಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿದ್ದಾರೆ.
ಹಾಗೆಯೇ ಕೊಪ್ಪ ತಾಲೂಕು ಜಯಪುರ ನಿವಾಸಿಯಾಗಿರುವ ಎ ಎಸ್ ಐ ಗಿರೀಶ್ ಅವರಿಗೆ ಈ ಹಿಂದೆ ಚಿಕ್ಕಮಗಳೂರು ಎಸ್ ಪಿ ಕಚೇರಿಯಲ್ಲಿ, ಜಯಪುರದಲ್ಲಿ ಹಾಗೂ ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಈ ಹಿಂದೆ 2015 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಇವರಿಗೆ ದೊರೆತಿತ್ತು. ಇದೀಗ ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯ ಸಂಧರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಎಎಸ್ಐ ಗಿರೀಶ್ ಅವರು ಎರಡನೆಯ ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯ 9900 ಹುದ್ದೆಗೆ ಅರ್ಜಿ ಆಹ್ವಾನ; SSLC, ITI ವಿದ್ಯಾರ್ಹತೆ – 19,900 ಸಂಬಳ













