ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುವ ಮೂಲಕ “ಈಸೀ ಲೈಫ್” ವಿಶೇಷ ರಿಪೇರಿ ಮೇಳವನ್ನು ಆಯೋಜಿಸಲಾಗಿದೆ.
ಜನವರಿ 19ರಿಂದ 24ರವರೆಗೆ ಈಸೀ ಲೈಫ್ ಎಂಟರ್ಪ್ರೈಸಸ್ ಕೊಪ್ಪದ ಬಾಳಡಿ ಬ್ರಾಂಚ್ನಲ್ಲಿ ನಡೆಯುತ್ತಿರುವ ಈ ವಿಶೇಷ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳನ್ನು ರಿಪೇರಿ ಮಾಡಿಕೊಡಲಾಗುತ್ತದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಈ ಮೇಳದಲ್ಲಿ ರೈತರ ಬಳಿ ಈಗಾಗಲೇ ಇರುವ ಚೈನ್ಸಾ, ವೀಡ್ ಕಟರ್, ಸ್ಪ್ರೇಯರ್, ಬ್ಯಾಟರಿ ಸ್ಪ್ರೇಯರ್, ದೋಟಿ, ಪೆಪ್ಪರ್ ಪೀಲಿಂಗ್ ಯಂತ್ರ, ಡಿಗ್ಗರ್ ಯಂತ್ರ, ಪಂಪ್ಸೆಟ್, ಜನರೇಟರ್, ಟಿಲ್ಲರ್ ಸೇರಿದಂತೆ ಯಾವುದೇ ಸಮಸ್ಯೆಯಿಂದ ಸರಿಯಾಗಿ ಕೆಲಸ ಮಾಡದಿರುವ ಕೃಷಿ ಯಂತ್ರೋಪಕರಣಗಳನ್ನು ಉಚಿತವಾಗಿ ರಿಪೇರಿ ಮಾಡಿ “ನ್ಯೂ ಲೈಫ್” ನೀಡುವ ವಿಶೇಷ ರಿಪೇರಿ ಮೇಳವನ್ನು ಆಯೋಜಿಸಲಾಗಿದೆ.
ಮೇಳ ನಾಳೆ ಕೊನೆಯ ದಿನವಾಗಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ರೈತರು ಈ ಸದಾವಕಾಶವನ್ನ ಉಪಯೋಗಿಸಿಕೊಳ್ಳಲು ಈ ಕೂಡಲೇ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು. 9364109592, 9483760798, 9880548013 ಈ ಸಂಖ್ಯೆಗಳ
ಈಸೀ ಲೈಫ್ ಶಾಖೆಯಲ್ಲಿ ಹಲವು ಯಂತ್ರೋಪಕರಣ ಲಭ್ಯ:
ಈ ಈಸೀ ಲೈಫ್ ಶಾಖೆಯಲ್ಲಿ ರೈತರಿಗೆ ಉಪಯುಕ್ತವಾಗುವ ಎಲ್ಲಾ ಯಂತ್ರೋಪಕರಣಗಳ ದೊರೆಯಲಿದ್ದು, ಯಂತ್ರೋಪಕರಣಗಳ ಲೈವ್ ಡೆಮೋ ಕೂಡ ನೀಡಲಾಗುತ್ತದೆ. ಜೊತೆಗೆ ಆಯ್ದ ಯಂತ್ರೋಪಕರಣಗಳ ಮೇಲೆ ವಿಶೇಷ ರಿಯಾಯಿತಿ ದರ, ಆಫರ್ಗಳು ಹಾಗೂ ಮಾರಾಟೋತ್ತರ ಸೇವೆಯ ಭರವಸೆ ನೀಡಲಾಗುತ್ತದೆ.












