ಜಯಪುರ: (ನ್ಯೂಸ್ ಮಲ್ನಾಡ್ ವರದಿ) ಮಹಾರಾಷ್ಟ್ರದ ರಾಯಗಡ್ ದಲ್ಲಿ ಆಯೋಜಿಸಲಾಗಿದ್ದ ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಅಸ್ಮಿತ ಕಿಕ್ ಬಾಕ್ಸಿಂಗ್ ವುಮೆನ್ಸ್ ಲೀಗ್ ಸ್ಪರ್ಧೆಯಲ್ಲಿ ಜಯಪುರದ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ ಕರಾಟೆ ಅಸೋಸಿಯೇಷನ್ ಆಫ್ ಚಿಕ್ಕಮಗಳೂರು (ರಿ) ವಿದ್ಯಾರ್ಥಿಗಳು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ಈ ಸ್ಪರ್ಧೆಯಲ್ಲಿ ಹರ್ಷಿಕ ಮತ್ತು ಆತ್ಮಿಕ ಭಾಗವಹಿಸಿದ್ದು, ಆತ್ಮಿಕಾ A. K.(ಕಿಕ್ ಬಾಕ್ಸಿಂಗ್ ಲೈಟ್ ಕಾಂಟೆಕ್ಟ್ ಫೈಟ್) ಅಂಡರ್ 50 ಕೆಜಿಯಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಒಟ್ಟು 550 ಸ್ಪರ್ಧಿಗಳು ಭಾಗಿಯಾಗಿದ್ದು, ಇದರಲ್ಲಿ 7 ವರ್ಷದಿಂದ 60 ವರ್ಷದ ವಿವಿಧ ಕ್ಯಾಟಗರಿಯ ಎಲ್ಲಾ ಸ್ಪರ್ಧಿಗಳು ಭಾಗವಹಿಸಿದ್ದು ಖೇಲೋ ಇಂಡಿಯಾದ ಕಿಕ್ ಬಾಕ್ಸಿಂಗ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಬಂದ ಮೊದಲನೇ ಪದಕ ಇದಾಗಿದೆ.
ಸ್ಪರ್ಧಿಗಳನ್ನು ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಕರಾಟೆ ಅಸೋಸಿಯೇಷನ್ ಜಯಪುರ ಅಧ್ಯಕ್ಷ ಕಿಬ್ಬಿ ಪ್ರಸನ್ನ ಕುಮಾರ್, ಕಾರ್ಯದರ್ಶಿ ವಿಶ್ವನಾಥ್.ಎಸ್, ಕರಾಟೆ ಶಿಕ್ಷಕ ಮಣಿಕಂಠ. ಆರ್, ರೇವತಿ ಮೇಡಂ ಹಾಗೂ ಪೋಷಕರು ಅಭಿನಂದಿಸಿದರು.

ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ












