ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಿಂದ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿದ್ದ ಘಟನೆ ಒಂದು ಇತ್ತೀಚೆಗಷ್ಟೇ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಅಂತಹದ್ದೇ ಘಟನೆ ನಡೆದಿದೆ. ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ 20 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ.
ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!

ಇಂದು (ಅಕ್ಟೋಬರ್ 12) ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 11.05 ಕ್ಕೆ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ 20 ನಿಮಿಷ ತಡವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ
ಇದನ್ನೂ ಓದಿ; ರೈತರಿಗೆ ಸಿಹಿ ಸುದ್ದಿ;ಪಿಎಂ ಕಿಸಾನ್ ಹೊಸ ಕಂತಿನ ಹಣ ಈ ತಿಂಗಳಲ್ಲೇ ಬಿಡುಗಡೆ?
ಮೋಡ ಕವಿದ ವಾತಾವರಣ ಇರುವುದರಿಂದ ವಿಸಿಬಲಿಟಿ ಇಲ್ಲದಿರುವ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ವಿಳಂಬವಾಗಿದೆ. ಇನ್ನು ಇದೇ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ; ರಾಜ್ಯದಲ್ಲಿ ಪಟಾಕಿ ಬ್ಯಾನ್;ದೀಪಾವಳಿಗೂ ಪಟಾಕಿ ಹೊಡೀಬಾರದಾ?;ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಈ ಹಿಂದೆಯೂ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಹೋಗಿದ್ದ ವಿಮಾನ:
ಕಳೆದ ಭಾನುವಾರ ಅಂದರೆ ಅಕ್ಟೋಬರ್ 8 ರಂದು ಹವಾಮಾನ ವೈಪರೀತ್ಯದಿಂದಾಗಿ ಇಂಡಿಗೋ ವಿಮಾನ ಶಿವಮೊಗ್ಗ ನಿಲ್ದಾಣದಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಅಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತುಂತುರು ಮಳೆ ಆಗುತ್ತಿತ್ತು. ಜೊತೆಗೆ ಭಾರೀ ಪ್ರಮಾಣದ ಮೋಡ ಆವರಿಸಿತ್ತು. ಹೀಗಾಗಿ ಪೈಲೆಟ್ ಗೆ ರನ್ ವೇ ಸರಿಯಾಗಿ ಕಾಣಿಸಿಲ್ಲ. ಇದರಿಂದ ಆಗಸದಲ್ಲಿ ಸುತ್ತಾಡಿತ್ತು. ಆದರೂ ರನ್ ವೇ ಸರಿಯಾಗಿ ಕಾಣಿಸದಿರುವುದರಿಂದ ಕೊನೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿತ್ತು
ಚಿಕ್ಕಮಗಳೂರು: ಅಕ್ರಮವಾಗಿ ಸಂಗ್ರಹಿಸಿದ್ದ 7.60 ಲಕ್ಷ ರೂ ಮೌಲ್ಯದ ಪಟಾಕಿ ವಶ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 7.60 ಲಕ್ಷ ರೂ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಉಪ ವಿಭಾಗ ಅಧಿಕಾರಿ, ತಹಸಿಲ್ದಾರ್ ಮತ್ತು ಬಸವನಹಳ್ಳಿ ಹಾಗೂ ನಗರ ಠಾಣೆ ಪಿ.ಎಸ್.ಐ, ಸಿಬ್ಬಂದಿ ಹಾಗೂ ಅಗ್ನಿಶಾಮಕ ಇಲಾಖೆಯ ಸಹಯೋಗದೊಂದಿಗೆ ಈ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು ನಗರದ ಮೂರು ಸ್ಥಳಗಳ ಗೋಡೌನ್ ಗಳಲ್ಲಿ ಪರವಾನಿಗೆ ಇಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು. ಹಾಲೆನಹಳ್ಳಿ ವಿಜಯದುರ್ಗ ದೇವಸ್ಥಾನದ ಒಳಭಾಗದಲ್ಲಿರುವ ಗೋಡೌನ್ ನಲ್ಲಿ 4 ಲಕ್ಷ ಮೌಲ್ಯದ 1000 ಕೆಜಿ ಪಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಶರೀಫ್ ಗಲ್ಲಿ ಗೋಡೌನ್ 3,50000/- ರೂ ಮೌಲ್ಯದ 684 ಕೆಜಿ ಪಟಾಕಿ ಹಾಗೂ ನಗರದ ಬಿ.ಎಮ್ ರಸ್ತೆ ಮಂಜುನಾಥ ಸ್ವಾಮಿ ಸ್ಟೋರ್ಸ್ ನಲ್ಲಿ 10000/- ರೂ ಮೌಲ್ಯದ 25 ಕೆಜಿ ಪಟಾಕಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.












