ಮೂಡಿಗೆರೆ: ಅಂಗಡಿಗಳಲ್ಲಿ ಕಳ್ಳತನ ಮಾಡಿದ ಆರೋಪಿ ಖಾಕಿ ಬಲೆಗೆ

ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲವು ತಿಂಗಳುಗಳ ಹಿಂದೆ ಬಣಕಲ್ ಪಟ್ಟಣದ ಮೊಬೈಲ್ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ಮಂಗಳೂರಿನಲ್ಲಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 

ಇದನ್ನೂ ಓದಿ; ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್; ಏನಿದು ಎಮರ್ಜೆನ್ಸಿ ಟೆಸ್ಟ್ ಮೆಸೇಜ್ ಅಲರ್ಟ್; ಕಾರಣಗಳೇನಿರಬಹುದು? ಇಲ್ಲಿದೆ ಇದರ ಹಿಂದಿನ ಗುಟ್ಟು

ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್, ರನ್ನಗೌಡ ಪಾಟೀಲ್ ಸಾರಥ್ಯದಲ್ಲಿ ಕಾರ್ಯಾಚರಣೆ ನಡೆಸಿ ಬಣಕಲ್ ನ ಮೊಬೈಲ್ ಹಾಗೂ ಇತರ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಆದರೆ ಪೊಲೀಸರು ಕಳ್ಳರ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ ದಾವಣಗೆರೆ ಮೂಲದ ಆರೋಪಿ ಹುಸೇನ್ ಸಾಬ್ ಎಂಬುವನನ್ನು ಮಂಗಳೂರಿನಲ್ಲಿ ಬಂದಿಸಿದ್ದಾರೆ.

 

ಇನ್ನು ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಜಗದೀಶ್, ಮೆಹಬೂಬ್, ದಿಲೀಪ್, ಕಿರಣ್ ಭಾಗವಹಿಸಿದ್ದರು.

ವರದಿ- ತನು ಕೊಟ್ಟಿಗೆಹಾರ

 

ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಲು ಪರದಾಡಿದ ವಿಮಾನ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಿಂದ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿದ್ದ ಘಟನೆ ಒಂದು ಇತ್ತೀಚೆಗಷ್ಟೇ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಅಂತಹದ್ದೇ ಘಟನೆ ನಡೆದಿದೆ. ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ 20 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ.

 

ಇಂದು (ಅಕ್ಟೋಬರ್ 12) ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 11.05 ಕ್ಕೆ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ 20 ನಿಮಿಷ ತಡವಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ

ಮೋಡ ಕವಿದ ವಾತಾವರಣ ಇರುವುದರಿಂದ ವಿಸಿಬಲಿಟಿ ಇಲ್ಲದಿರುವ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ವಿಳಂಬವಾಗಿದೆ. ಇನ್ನು ಇದೇ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.

ಈ ಹಿಂದೆಯೂ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಹೋಗಿದ್ದ ವಿಮಾನ:
ಕಳೆದ ಭಾನುವಾರ ಅಂದರೆ ಅಕ್ಟೋಬರ್ 8 ರಂದು ಹವಾಮಾನ ವೈಪರೀತ್ಯದಿಂದಾಗಿ ಇಂಡಿಗೋ ವಿಮಾನ ಶಿವಮೊಗ್ಗ ನಿಲ್ದಾಣದಲ್ಲಿ ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಅಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತುಂತುರು ಮಳೆ ಆಗುತ್ತಿತ್ತು. ಜೊತೆಗೆ ಭಾರೀ ಪ್ರಮಾಣದ ಮೋಡ ಆವರಿಸಿತ್ತು. ಹೀಗಾಗಿ ಪೈಲೆಟ್ ಗೆ ರನ್ ವೇ ಸರಿಯಾಗಿ ಕಾಣಿಸಿಲ್ಲ. ಇದರಿಂದ ಆಗಸದಲ್ಲಿ ಸುತ್ತಾಡಿತ್ತು. ಆದರೂ ರನ್ ವೇ ಸರಿಯಾಗಿ ಕಾಣಿಸದಿರುವುದರಿಂದ ಕೊನೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿತ್ತು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.