ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ರೈತರ ಒತ್ತುವರಿ ಜಮೀನನ್ನು ಸಕ್ರಮಗೊಳಿಸಲು ಸರ್ಕಾರ ಲೀಸ್ ಗೆ ಪಡೆಯುತ್ತಿದ್ದು, ಆದರೆ, ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಎದುರಾದ ಕಾರಣ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ಮನವಿಯಲ್ಲಿ ಏನಿದೆ?;
ಶೃಂಗೇರಿ ತಾಲೂಕಿನಲ್ಲಿ ನೂರಾರು ರೈತರು ಸ್ವಲ್ಪ ಒತ್ತುವರಿ ಮಾಡಿಕೊಂಡಿದ್ದು, ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಕಾಡು ಪ್ರಾಣಿಗಳಿಂದ ರೈತರು ಬೆಳೆಗೆ ಪ್ರತಿದಿನ ನಷ್ಟವಾಗುತ್ತಿದೆ. ಹಳದಿ ಎಲೆರೋಗ, ಎಲೆಚುಕ್ಕಿ ರೋಗದಿಂದ ರೈತರ ಬದುಕು ಆತಂತ್ರವಾಗಿದೆ.
ಸರ್ಕಾರ ರೈತರ ಒತ್ತುವರಿ ಜಮೀನನ್ನು ಸಕ್ರಮಗೊಳಿಸಲು ಜಮೀನನ್ನು ಲೀಸ್ ಗೆ ಪಡೆಯುತ್ತಿದ್ದು, 30-12-2024 ಹಾಗೂ 31-12-2024 ರಂದು ರೈತರು ಅರ್ಜಿ ನೀಡಲು ಬಂದಾಗ ಸರ್ವರ್ ಸಮಸ್ಯೆಯಿಂದ ಹಲವಾರು ರೈತರು ಅರ್ಜಿ ನೀಡದೆ ವಾಪಾಸ್ ಹೋಗಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಹೀಗಾಗಿ ಕಂಪ್ಯೂಟರ್ ತೊಂದರೆಯಿಂದ ಸಮಸ್ಯೆಯಾಗಿದೆ ಎಂದು ಸುಮಾರು 50 ಕ್ಕೂ ಹೆಚ್ಚು ರೈತರು ಶೃಂಗೇರಿ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಲವಳ್ಳಿ ಕಳಸಪ್ಪ, ಬೇಗಾನೆ ಚನ್ನಕೇಶವ, ಸುಜನ್, ಅವಿನಾಶ್, ಅನಂತಕೃಷ್ಣ, ಸುಜಿತ್, ಕುಸುಮ ಸುಧಾಕರ, ಮಧುಕರ, ಗಣೇಶ್, ಮೊದಲಾದವರು ಇದ್ದರು.
ಇದನ್ನೂ ಓದಿ: 3 ಮದ್ಯದ ಬಾಟಲ್ ಖರೀದಿಸಿದ್ರೆ 1 ಫ್ರೀ; ಹೊಸ ವರ್ಷದ ಆಫರ್, ಯಾರಿಗುಂಟು ಯಾರಿಗಿಲ್ಲ!












