ಶುಭ ಪೂಂಜರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಾಡಿನ ಚಿತ್ರೀಕರಣದ ವೇಳೆ ನಟಿ ಶುಭಾ ಪೂಂಜಾರೊಂದಿಗೆ ಕೆಲ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ್ದಾರೆ ಎಂದು ಸುದ್ದಿ ಬಿತ್ತರವಾಗಿತ್ತು ಈ ಸಂಬಂಧ ಚಿತ್ರ ನಿರ್ಮಾಪಕ ತಂಡದ ನಂಜರಾಜ ಅರಸ್ ನ್ಯೂಸ್ ಮಲ್ನಾಡ್ ಗೆ ಸ್ಪಷ್ಟೀಕರಣ ನೀಡಿದ್ದಾರೆ.

 

ಹೌದು,  ಘಟನೆ ಕುರಿತು ಇದ್ದ ಹಲವಾರು ಗೊಂದಲಗಳಿಗೆ ತೆರೆ ಎಳೆಯಲು ನ್ಯೂಸ್ ಮಲ್ನಾಡ್ ಚಿತ್ರದ ನಿರ್ಮಾಪಕ ತಂಡದ ನಂಜರಾಜ ಅರಸ್ ಅವರಿಗೆ ಕರೆ ಮಾಡಿತ್ತು. ಈ ಕುರಿತು ಪ್ರತಿಕ್ರಿಯೆಸಿದ ಅವರು, ಕಳೆದ 2 ದಿನಗಳಿಂದ ಮೂಡಿಗೆರೆಯ ಮೈದಾಡಿ ಗುಡ್ಡದಲ್ಲಿ ಚಿತ್ರೀಕರಣವನ್ನು ನಡೆಸುತ್ತಿದ್ದು, ಸ್ಥಳೀಯರು ಈ ಭಾಗದಲ್ಲಿ ಚಿತ್ರೀಕರಣದ ನಡೆಸಲು ಅನುಮತಿ ಪಡೆದಿದ್ದೀರಾ? ಯಾವ ಸಿನಿಮಾ ಎಂದು ಪ್ರಶ್ನೆ ಮಾಡಿದ್ದಾರೆ. ಕೊರಗಜ್ಜನ ಹಾಡಿನ ಚಿತ್ರೀಕರಣದ ಎಂದು ತಿಳಿಸಿದಾಗ ಈ ಭಾಗದಲ್ಲಿ ಚಿತ್ರೀಕರಣದ ನಡೆಸಲು ಅನುಮತಿ ಪಡೆಯದೇ ಹೇಗೆ ಚಿತ್ರೀಕರಣದ ನಡೆಸುತ್ತೀರಾ ಎಂದು ಸ್ಥಳೀಯರಿಗೂ ಹಾಗೂ ಚಿತ್ರೀಕರಣ ತಂಡಕ್ಕೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಚಿತ್ರೀಕರಣವನ್ನು ನಿಲ್ಲಿಸಿದೆವು. ನಟಿ ಶುಭಾ ಪೂಂಜಾರೊಂದಿಗೆ ಕೆಲ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟನೆ ನೀಡಿದ್ದಾರೆ.

ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ನಾವು ತೆರೆಳಿದ್ದೆವು. ಆ ಸಮಯದಲ್ಲಿ ನಾವು ಚಿತ್ರ ತಂಡದೊಂದಿಗೆ ಯಾವ ಸಿನಿಮಾ, ಯಾವ ಹಾಡು ಎಂದು ಮಾಹಿತಿ ಕೇಳಿದೆವು. ಅವರು ಆಗ ಕೊರಗಜ್ಜನ ಹಾಡಿನ ಶೂಟಿಂಗ್ ಎಂದರು. ಅಪಾರ ದೈವ ಭಕ್ತಿ ಹೊಂದಿರುವ ನಾವು ಇಲ್ಲಿ ಇಂತಹ ಶೂಟಿಂಗ್ ಮಾಡದಂತೆ ತಿಳಿಸಿದೆವು. ಅವರ ಬಳಿ ಶೂಟಿಂಗ್ ಮಾಡಲು ಅನುಮತಿ ಸಹ ಇರಲ್ಲಿಲ್ಲ. ಶುಭ ಪೂಂಜ ಅವರು ಎಲ್ಲಿ ಇದ್ದರು ಎಂಬ ಮಾಹಿತಿಯೇ ನಮಗಿರಲಿಲ್ಲ. ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದೇವೆ ಎನ್ನುವುದು ಸುಳ್ಳು. – ರವಿ, ಸ್ಥಳೀಯ

ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಚಿತ್ರೀಕರಣ ತಂಡದಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆ ಮೂಡಿಗೆರೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಹುಲಿ ಉಗುರು ಹೊಂದಿದ್ದ ಆರೋಪ: ಎನ್ ಆರ್ ಪುರದಲ್ಲಿ DRFO ದರ್ಶನ್ ಅರೆಸ್ಟ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದರಲ್ಲಿ ಕಳಸದ ಅರಣ್ಯಾಧಿಕಾರಿಯೊಬ್ಬ ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

 

ಡಿ.ಆರ್.ಎಫ್.ಓ ದರ್ಶನ್ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿದ್ದು, ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿ.ಎಫ್.ಓ ನಂದೀಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರಿನ ಡಾಲರ್  ಧರಿಸಿದ ಆರೋಪ ಕೇಳಿಬಂದಿತ್ತು. ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್‌ಎಫ್‌ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿತ್ತು. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಕೂಡ ಮಾಡಿದ್ದ.

 

ಕಾನೂನು ಎಲ್ಲರಿಗೂ ಒಂದೇ ಸಂತೋಷ್, ಮಾರ್ಕಂಡೇಯ ದೇವಸ್ಥಾನದ ಅರ್ಚಕರು ಸೇರಿದಂತೆ ಅಮಾಯಕರ ಮೇಲೆ ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆಯವರು ಆರ್‌ಎಫ್‌ಒ ದರ್ಶನ್ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರುದಾರ ಸುಪ್ರೀತ್ ಈ ಬಗ್ಗೆ ತಿಳಿಸಿದ್ದ ಬೆನ್ನಲ್ಲೆ ನಿನ್ನೆ ನ್ಯೂಸ್ ಮಲ್ನಾಡ್ ವರದಿ ಕೂಡ ಮಾಡಿತ್ತು ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.