ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಪ್ರಕರಣ ಹಿನ್ನಲೆ ವೈಲ್ಡ್ ಲೈಫ್ ಆಕ್ಟ್ ನಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು ಇದೀಗ ಬಂಧನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರದ ಮಾರ್ಕೆಟ್ ರಸ್ತೆಯಲ್ಲಿದ್ದ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಮಾಡಿದ್ದಾರೆ. ಕಳೆದ ರಾತ್ರಿ ಚಿರತೆ ಹಾಗೂ ಜಿಂಕೆ ಎರಡು ಪ್ರಾಣಿಯ ಚರ್ಮವನ್ನ ವಶಕ್ಕೆ ಪಡೆದಿದ್ದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ವೈಲ್ಡ್ ಲೈಫ್ ಆಕ್ಟ್ ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅರಣ್ಯ ಅಧಿಕಾರಿಗಳು ಎರಡು ಪ್ರಾಣಿಯ ಚರ್ಮವನ್ನ ಎಫ್.ಎಸ್.ಎಲ್. ವರದಿಗೆ ಕಳುಹಿಸಲಿದ್ದು, ಸದ್ಯ ಚಿಕ್ಕಮಗಳೂರು ವಲಯದ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಇದೀಗ ಶಾಖಾದ್ರಿಯ ಬಂಧನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.
ಇದನ್ನೂ ಓದಿ; ಕೃಷಿಕರಿಗೆ ಸಿಹಿ ಸುದ್ದಿ..!; ಕೇಂದ್ರದಿಂದ ರಸಗೊಬ್ಬರಕ್ಕೆ ಸಬ್ಸಿಡಿ ಅನುಮೋದನೆ; ಈ ತಿಂಗಳ ವರೆಗೆ ಸಬ್ಸಿಡಿ ಲಭ್ಯ
ಹಿಂದೂಗಳಿಗೆ ಒಂದು ಕಾನೂನು…ಮುಸ್ಲಿಂ ಅವರಿಗೆ ಒಂದು ಕಾನೂನು…ಬಜರಂಗದಳದಿಂದ ಕಿಡಿ:
ಹುಲಿ ಉಗುರು ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಾಯ್ದೆ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಿರುವ ಪ್ರಕರಣಗಳನ್ನು ನಡೆದಿದ್ದೆ. ಅದೇ ರೀತಿ ಖಾಂಡ್ಯಾ ದೇವಸ್ಥಾನದ ಅರ್ಚಕರನ್ನ ಬಂಧಿಸಿರುವ ರೀತಿಯೇ ಶಾಖಾದ್ರಿ ಮನೆಯಲ್ಲಿ ಈಗಾಗಲೇ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿದೆ. ಅರ್ಚಕರನ್ನು ಹೇಗೆ ಕಾನೂನಿನ ಅಡಿಯಲ್ಲಿ ಬಂಧಿಸಿದ್ದಾರೋ ಅದೇ ರೀತಿ ಶಾಖಾದ್ರಿಯನ್ನು ಕೂಡ ಬಂಧಿಸಬೇಕು ಎಂದು ಬಜರಂಗದಳವರು ಕಿಡಿಕಾರಿದ್ದಾರೆ.
ಹುಲಿ ಉಗುರು ಹೊಂದಿದ್ದ ಆರೋಪ: ಎನ್ ಆರ್ ಪುರದಲ್ಲಿ DRFO ದರ್ಶನ್ ಅರೆಸ್ಟ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಅದರಲ್ಲಿ ಕಳಸದ ಅರಣ್ಯಾಧಿಕಾರಿಯೊಬ್ಬ ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎನ್.ಆರ್.ಪುರದಲ್ಲಿ ಬಂಧನ ಮಾಡಿ ಕೊಪ್ಪ ಡಿ.ಎಫ್.ಓ ಕಚೇರಿಗೆ ಕರೆ ತರಲಾಗಿದೆ.
ಏನಿದು ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅರಣ್ಯ ರಕ್ಷಕರು, ವನ್ಯಜೀವಿ ರಕ್ಷಕರು ಎಂದು ಹೇಳಿಕೊಳ್ಳುವ ಅರಣ್ಯ ಅಧಿಕಾರಿಯೊಬ್ಬ ಹುಲಿ ಉಗುರಿನ ಡಾಲರ್ ಧರಿಸಿದ ಆರೋಪ ಕೇಳಿಬಂದಿತ್ತು. ಹುಲಿ ಉಗುರು ಧರಿಸಿದ ಆರೋಪದ ಹಿನ್ನಲೆ ಕಳಸದ ಡಿಆರ್ಎಫ್ಓ ದರ್ಶನ್ ಎಂಬಾತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಗಿತ್ತು. ದರ್ಶನ್ ಹುಲಿಯ ಉಗುರಿನ ಡಾಲರ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಶೋಕಿ ಮಾಡಿದ್ದ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ದರ್ಶನ್ ಫೋಟೋ ಡಿಲಿಟ್ ಕೂಡ ಮಾಡಿದ್ದ.












