ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಭದ್ರಾ ಮೇಲ್ದಂಡೆ ನಾಲೆಗೆ ಬಿದ್ದ ಎರಡು ಕಡವೆಗಳು, ಒಂದು ಕಡವೆ ಮರಿಯನ್ನು ಅರಣ್ಯ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಪಟ್ಟಣ ಹೊರವಲಯದ ಅತ್ತಿಗನಾಳು, ದೋರನಾಳು ಗ್ರಾಮ ಸಮೀಪದ ಹಿರಿಯೂರಿನ ವಾಣಿವಿಲಾಸ ಸಾಗರದ ಕಡೆ ಹರಿದು ಹೋಗುತ್ತಿರುವ ಭದ್ರಾ ಮೇಲ್ದಂಡೆ ನಾಲೆಯಲ್ಲಿ ಗುರುವಾರ ತಡರಾತ್ರಿ ನೀರು ಕುಡಿಯಲು ಹೋಗಿ ಆಯ ತಪ್ಪಿ ಬಿದ್ದಿರಬಹುದೆಂದು ಅಂದಾಜಿಸಲಾಗಿರುವ ಮೂರು ಕಡವೆಗಳನ್ನು ಶುಕ್ರವಾರ ಬೆಳಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಅರಣ್ಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ಮೇಲಕ್ಕೆ ಎತ್ತಿ, ನಿತ್ರಾಣಗೊಂಡಿದ್ದ ಕಡವೆಗಳನ್ನು ಉಪಚರಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಅಧಿಕಾರಿ ಜಿ.ಜಿ.ನಾಗೇಂದ್ರ, ಸಿಬ್ಬಂದಿ ವೈ.ಹರೀಶ್ಕುಮಾರ್, ಎಲ್.ಪಿ.ಅರುಣ್ಕುಮಾರ್, ಉಮೇಶ, ಪುನೀತ್, ಅಖಿಲ್ ಗೌಡ, ಡಿಆರ್ಎಫ್ ಪ್ರದೀಪ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!












