ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ: ಪೆಟ್ರೋಲ್ ಬಂಕ್ ನಲ್ಲಿ ಸಿಹಿ ತಿಂಡಿ ವಿತರಣೆ

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ದುರ್ಗಾಂಬ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸಲಾಯಿತು.

 

ಇದನ್ನೂ ಓದಿ; ಶೀಘ್ರವೇ ರೈತರಿಗೆ ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ದೇಶದ ಹೆಮ್ಮೆ ಆದ್ದರಿಂದಾಗಿ ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಬೆಳಗಿನಿಂದ ಸಂಜೆವರೆಗೂ ಸಿಹಿಯನ್ನು ವಿತರಿಸಲಾಗುವುದು ಎಂದು ಪೆಟ್ರೋಲ್ ಬಂಕ್ ನ ವ್ಯವಸ್ಥಾಪಕ ಶರತ್ ಹೇಳಿದರು.

ಇದನ್ನೂ ಓದಿ; ಈ ಯೋಜನೆಯ ಫಲಾನುಭವಿಗಳು 10 ಲಕ್ಷದ ವರೆಗೆ ಪಡೆಯಬಹುದು ವಿಮಾ ಕವರೇಜ್

ಈ ಸಂದರ್ಭದಲ್ಲಿ ಶರತ್, ಪ್ರಕಾಶ್, ಅನ್ವಿತ್, ಸುದೀಪ್, ಸುಮಂತ್, ದಿವ್ಯ, ಕಾರ್ತಿಕ್, ವಿಜ್ಞೇಶ್ ಇದ್ದರು.

 

ಶೃಂಗೇರಿ : ಶಾರದಾ ಪೀಠದಲ್ಲಿ ರಾಮಮಂದಿರ ಮಾದರಿ ಕಲಾಕೃತಿ ಪ್ರದರ್ಶನ

ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ)ಶಾರದಾ ಪೀಠದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ

 

ಹಿಂದೂಗಳ 500 ವರ್ಷಗಳ ಕನಸಾದ ಭವ್ಯ ರಾಮಮಂದಿರ ಉದ್ಘಾಟನೆಗೆ ಇನ್ನೇನು ಒಂದು ದಿನವಷ್ಟೇ ಬಾಕಿ ಇದೆ, ನಾಳೆ ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಆ ಸಂದರ್ಭಕ್ಕಾಗಿ ಕಾದು ಕುಳಿತಿದೆ.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಆದಿಶಂಕರರು ಸ್ಥಾಪಿಸಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆವರಣದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ರಾಮಮಂದಿರದ ಭವ್ಯತೆ ಈ ಮಾದರಿಯಲ್ಲೂ ಕಣ್ಣಿಗೆ ಕಟ್ಟಿದಂತಿದೆ, ನನಗೆ ರಾಮ ಮಂದಿರ ನೋಡೋಕೆ ಹೋಗಬೇಕು ಎಂದು ಆಸೆಯಿದೆ ಆದರೆ ಹೋಗಲಾಗುತ್ತಿಲ್ಲ ಎಂದು ನಿರಾಸೆಗೆ ಒಳಗಾದವರು ಈ ಮಾದರಿ ಕಲಾಕೃತಿಯನ್ನು ನೋಡಿ ಕಣ್ತುಂಬಿಕೊಳ್ಳಬಹುದು.

ವಿನಯ್ ರಾವ್ ಅವರು ನಿರ್ಮಿಸಿದ ಕಲಾಕೃತಿಯಾಗಿದ್ದು, ಇದು ಅವರ 55ನೇ ಪ್ರದರ್ಶನವಾಗಿದೆ.
55ನೇ ಪ್ರದರ್ಶನವು ಶ್ರೀಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಇಡಲಾಗಿದ್ದು, ದಿನಾಂಕ 25.01.2024ರವರೆಗೆ ಪ್ರದರ್ಶನಕ್ಕೆ ಅವಕಾಶವಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.