ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ)ಶಾರದಾ ಪೀಠದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ


ಇದನ್ನೂ ಓದಿ; ಶೀಘ್ರವೇ ರೈತರಿಗೆ ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ

ಹಿಂದೂಗಳ 500 ವರ್ಷಗಳ ಕನಸಾದ ಭವ್ಯ ರಾಮಮಂದಿರ ಉದ್ಘಾಟನೆಗೆ ಇನ್ನೇನು ಒಂದು ದಿನವಷ್ಟೇ ಬಾಕಿ ಇದೆ, ನಾಳೆ ನಡೆಯುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇಡೀ ದೇಶವೇ ಆ ಸಂದರ್ಭಕ್ಕಾಗಿ ಕಾದು ಕುಳಿತಿದೆ.
ಇದನ್ನೂ ಓದಿ; ಈ ಯೋಜನೆಯ ಫಲಾನುಭವಿಗಳು 10 ಲಕ್ಷದ ವರೆಗೆ ಪಡೆಯಬಹುದು ವಿಮಾ ಕವರೇಜ್
ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಆದಿಶಂಕರರು ಸ್ಥಾಪಿಸಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆವರಣದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ರಾಮಮಂದಿರದ ಭವ್ಯತೆ ಈ ಮಾದರಿಯಲ್ಲೂ ಕಣ್ಣಿಗೆ ಕಟ್ಟಿದಂತಿದೆ, ನನಗೆ ರಾಮ ಮಂದಿರ ನೋಡೋಕೆ ಹೋಗಬೇಕು ಎಂದು ಆಸೆಯಿದೆ ಆದರೆ ಹೋಗಲಾಗುತ್ತಿಲ್ಲ ಎಂದು ನಿರಾಸೆಗೆ ಒಳಗಾದವರು ಈ ಮಾದರಿ ಕಲಾಕೃತಿಯನ್ನು ನೋಡಿ ಕಣ್ತುಂಬಿಕೊಳ್ಳಬಹುದು.
ವಿನಯ್ ರಾವ್ ಅವರು ನಿರ್ಮಿಸಿದ ಕಲಾಕೃತಿಯಾಗಿದ್ದು, ಇದು ಅವರ 55ನೇ ಪ್ರದರ್ಶನವಾಗಿದೆ.
55ನೇ ಪ್ರದರ್ಶನವು ಶ್ರೀಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಇಡಲಾಗಿದ್ದು, ದಿನಾಂಕ 25.01.2024ರವರೆಗೆ ಪ್ರದರ್ಶನಕ್ಕೆ ಅವಕಾಶವಿದೆ.


ರಾಮಮಂದಿರ ಉದ್ಘಾಟನೆಗೆ ರಜೆ ಹಾಕಿದ್ರೆ ಸೆಂಟ್ ಜೋಸೆಫ್ ಶಾಲೆಯಲ್ಲಿ ಕಟ್ಟಬೇಕಂತೆ 1,000ರೂ ಕಪ್ಪ ಕಾಣಿಕೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಜನವರಿ 22 ರಂದು ನಡೆಯಲಿದ್ದು, ದೇಶ-ವಿದೇಶಗಳಿಂದಲೂ ರಾಮನ ದರ್ಶನಕ್ಕೆ ಕಾದು ಕುಳಿತಿದ್ದಾರೆ. ಹೀಗಿರುವಾಗ ಕಾಫಿನಾಡು ಚಿಕ್ಕಮಗಳೂರಿನ ಕ್ರಿಶ್ಚಿಯನ್ ಶಾಲೆಯೊಂದರ ನಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ರಾಮಮಂದಿರ ಉದ್ಘಾಟನೆ ದಿನ ಯಾರೂ ಶಾಲೆಗೆ ರಜೆ ಹಾಕುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಸೋಮವಾರ ಶಾಲೆಗೆ ರಜೆ ಹಾಕಿದರೆ 1000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಚಿಕ್ಕಮಗಳೂರು ನಗರದ ಸೆಂಟ್ ಜೋಸೆಫ್ ಶಾಲೆಯೊಂದರ ಆಡಳಿತ ಮಂಡಳಿ ಮಕ್ಕಳಿಗೆ ಎಚ್ಚರಿಕೆ ನೀಡಿದೆ. ಶಾಲೆಯ ಈ ನಡೆಯಿಂದ ಬಜರಂಗದಳ, ವಿ.ಎಚ್.ಪಿ. ಪ್ರತಿಭಟನೆಗೆ ಇಳಿದಿದ್ದು, ಆದೇಶವನ್ನು ಹಿಂದೆ ಪಡೆಯುವಂತೆ ಎಚ್ಚರಿಕೆ ನೀಡಿದ್ದಾರೆ.
ಹಿಂದೂ ಸಂಘಟನೆಯಿಂದ ಎಚ್ಚರಿಕೆ:
ಶಾಲೆಗಳಿಗೆ ರಜೆ ಕೊಡಬೇಕು ಎನ್ನುವುದು ನಮ್ಮ ಮೊದಲ ಬೇಡಿಕೆ, ಅದು ಸಾಧ್ಯವಾಗದೆ ಇದ್ದರೆ ಶಾಲೆಗಳಲ್ಲಿ ಎಲ್.ಇ.ಡಿ ಹಾಕಿ ಮಂದಿರ ಲೋಕಾರ್ಪಣೆಯನ್ನು ನೋಡುವ ವ್ಯವಸ್ಥೆ ಮಾಡಬಹುದು. ಇಲ್ಲವೇ ಯಾರಿಗೆಲ್ಲ ನೋಡಲು ಮನಸಿದೆಯೇ ಅವರು ರಜೆ ಹಾಕಿ ನೋಡಲಿ. ಅದನ್ನು ಬಿಟ್ಟು ಶಾಲೆಗೆ ಬರದಿದ್ದರೆ ದಂಡ ವಿಧಿಸುತ್ತೇವೆ ಎಂಬ ನಿಲುವು ನಡೆಯುವುದಿಲ್ಲ ಎಂದು ಹೇಳುವ ಮೂಲಕ ಇಡೀ ಜಿಲ್ಲೆಯಲ್ಲಿ ಇಂಥ ಕೃತ್ಯಗಳು ನಡೆಯಬಾರದು ಎಂದು ವಿಹಿಂಪ ಹಾಗೂ ಬಜರಂಗ ದಳ ಎಚ್ಚರಿಸಿದೆ.
ಇದನ್ನೂ ಓದಿ; ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; 96 ಕಾರ್ಯಕರ್ತೆ ಹಾಗೂ ಸಹಾಯಕಿಯರ ಭರ್ತಿಗೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?
ಇನ್ನು ಶನಿವಾರ ನವೋದಯ ಶಾಲೆಗಳ ಪ್ರವೇಶಕ್ಕೆ ಸಂಬಂಧಿಸಿದ ಪರೀಕ್ಷೆ ಇರುವುದರಿಂದ ಸೆಂಟ್ ಜೋಸೆಫ್ ಶಾಲೆಗೆ ರಜೆ ನೀಡಲಾಗಿದೆ. ಬಜರಂಗ ದಳ, ವಿ.ಎಚ್.ಪಿ. ಕಾರ್ಯಕರ್ತರು ಶಾಲೆಯ ಮುಂದೆ ಜಮಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಧಾವಿಸಿ, ಸೆಂಟ್ ಜೋಸೆಫ್ ಶಾಲೆಗೆ ಎಎಸ್ಪಿ ಕೃಷ್ಣಮೂರ್ತಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.












