ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಡ್ಯೂಟಿ ಮುಗೀತು ಬೇರೆಯವರು ಪೆಟ್ರೋಲ್ ಹಾಕ್ತಾರೆ ಎಂದಿದ್ದಕ್ಕೆ ವಾಹನ ಸವಾರನೊಬ್ಬ ಪೆಟ್ರೋಲ್ ಬಂಕ್ ಸಿಬ್ಬಂದಿಗಳನ್ನ ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ನಯಾರ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಮಧು ಹುರುಡಿ ಹಲ್ಲೆ ಮಾಡಿದ ವ್ಯಕ್ತಿ.
ಇದನ್ನೂ ಓದಿ; ಚಂದ್ರನ ಅಂಗಳಕ್ಕಿಳಿದ ರೋವರ್ ಪ್ರಜ್ಞಾನ್; ರೋವರ್ ಚಲನೆಯ ಮತ್ತೊಂದು ವಿಡಿಯೊವನ್ನು ಹಂಚಿಕೊಂಡ ಇಸ್ರೋ

ಮ್ಯಾನೇಜರ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ:
ಕಾರಿಗೆ ಪೆಟ್ರೋಲ್ ಹಾಕಿಸುವ ವಿಚಾರವಾಗಿ ವಾಹನ ಸವಾರ ಮಧು ಹುರುಡಿ ಎಂಬಾತ ಸಿಬ್ಬಂದಿಗಳ ಜೊತೆ ಕಿರಿಕ್ ತೆಗೆದು ಕಾರಿನಲ್ಲಿದ್ದ ಕ್ರಿಕೆಟ್ ಬ್ಯಾಟ್ನಿಂದ ಸಿಬ್ಬಂದಿಗಳ ಮೇಲೆ ಮನಬಂದAತೆ ಹಲ್ಲೆ ಮಾಡಿದ್ದಾನೆ. ಪೆಟ್ರೋಲ್ ಬಂಕ್ ಮ್ಯಾನೇಜರ್ ಸೇರಿದಂತೆ ನಾಲ್ವರ ಮೇಲೆ ಮಧು ಹುರುಡಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ದೃಶ್ಯವನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ; ಅರ್ನಬ್ ಗೋಸ್ವಾಮಿ ಪಾಲಾದ ಕನ್ನಡ ಖ್ಯಾತ ಸುದ್ದಿವಾಹಿನಿ; ದಿಗ್ವಿಜಯ ನ್ಯೂಸ್ ಇನ್ಮುಂದೆ ರಿಪಬ್ಲಿಕ್ ಕನ್ನಡ.. ಏನಿದು ಸುದ್ದಿ?
ಬಂಕ್ ಸಿಬ್ಬಂದಿ ಡ್ಯೂಟಿ ಮುಗಿಸಿ ಹೊರಡುವ ವೇಳೆಗೆ ಕಾರಿನಲ್ಲಿ ಬಂದು ಪೆಟ್ರೋಲ್ ಹಾಕಲು ಹೇಳಿದ್ದಾನೆ. ಈ ವೇಳೆ ಡ್ಯೂಟಿ ಮುಗೀತು ಹೊರಟಿದ್ದೇನೆ, ಮಹಿಳೆ ಪೆಟ್ರೋಲ್ ಹಾಕ್ತಾರೆ ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಈ ಸಂಬAಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕಾರು ಸವಾರ ಮಧು ಹುರುಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಸಂಸದ ಸ್ಥಾನದಿಂದ ಅನರ್ಹ
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ (prajwal revanna disqualified:) ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ ವಕೀಲ ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ (prajwal revanna disqualified:) ಆದೇಶಿಸಿದೆ.
ಇನ್ನು ಸಂಸದ ಸ್ಥಾನ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರ ಸಿದ್ಧತೆ ನಡೆಸಿದ್ದಾರೆ.












