ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನಾದ್ಯಂತ ಶನಿವಾರ ಮತ್ತೆ ಮಳೆ ಆರ್ಭಟಿಸಿದ್ದು, ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಪ್ರವಾಹ ಉಂಟಾಗಿ, ಮುಖ್ಯರಸ್ತೆಯಲ್ಲಿ ಒಂದು ಅಡಿ ನೀರು ಹರಿಯಿತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಇದನ್ನೂ ಓದಿ: ಕಂದಾಯ ಇಲಾಖೆಯಲ್ಲಿ ಜಾಬ್ ಆಫರ್;10th, 12th ವಿದ್ಯಾರ್ಹತೆ

ಅಲ್ಲದೆ ನಿನ್ನೆ ಸುರಿದ ಮಳೆಗೆ ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದಲ್ಲಿ ಚರಂಡಿಯ ಕೊಳಚೆ ನೀರು ಮನೆಗೆ ನುಗ್ಗಿದ ಘಟನೆ ಕೂಡ ನಡೆದಿದೆ.
ವಿದ್ಯಾರಣ್ಯಪುರದ ಕೇರೋಡಿ ಗಣೇಶ್ ಮೂರ್ತಿ ಅವರ ಮನೆಗೆ ಈ ಹಿಂದೆಯೂ ಕೂಡ ಒಮ್ಮೆ ನೀರು ನುಗ್ಗಿ ಮನೆಯ ಗೋಡೆ ಕುಸಿದಿತ್ತು. ಆದರೆ, ಇದುವರೆಗೂ ಕೂಡ ಸಂಬಂಧಪಟ್ಟವರು ಯಾವುದೇ ಶಾಶ್ವತ ಪರಿಹಾರಗಳು ನೀಡಿಲ್ಲ ಎಂದು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಶತ್ವತ ಪರಿಹಾರವನ್ನು ಕೂಡಲೇ ಒದಗಿಸಿಕೊಡಬೇಕಾಗಿದೆ.
ಇದನ್ನೂ ಓದಿ: ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ; ಸರ್ಕಾರದಿಂದ ನಿಯಮ ಪ್ರಕಟ












