
ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯೊಳಗೆ ನೀರು ನುಗ್ಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಈ ರೂಲ್ಸ್ ಕಡ್ಡಾಯ; ರಾಜ್ಯ ಸರ್ಕಾರದಿಂದ ಆದೇಶ

ಕಳಪೆ ಚರಂಡಿ ವ್ಯವಸ್ಥೆಯಿಂದ ಮನೆಯೊಳಗೆ ನುಗ್ಗಿದ ನೀರು:ಹೌದು, ಚರಂಡಿಗಳು ಮುಚ್ಚಿ ಹೋಗಿದ್ದು, ಇದರಿಂದ ಮಳೆ ನೀರು ಸೀದಾ ಮನೆಯೊಳಗೆ ನುಗ್ಗಿದೆ. ಹೀಗಾಗಿ ಇಡೀ ರಾತ್ರಿ ಗ್ರಾಮದ ಜನ ನೀರು ಹೊರಹಾಕಿದ್ದಾರೆ.

ಕಳಪೆ ಚರಂಡಿ ವ್ಯವಸ್ಥೆ ಕುರಿತು ಪ್ರತಿವರ್ಷ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದರೆ ದೇವರಮನೆಗುಡ್ಡದ ಮಳೆ ನೀರು ಸೀದಾ ಮನೆಯೊಳಗೆ ನುಗ್ಗುತ್ತದೆ. ಬೆಳಗ್ಗೆ ಇಡೀ ಮನೆ ಶುಚಿ ಮಾಡೋದು, ಸಂಜೆ ಮಳೆ ಬಂದ್ರೆ ಮತ್ತದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ
















