ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಸಂಬಂಧ ಅನೇಕ ಅವ್ಯವಸ್ಥೆಗಳು ನೆಲೆಯಲ್ಲಿ ಬರುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಕ್ರಮಕೈಗೊಳ್ಳದೆ ಇರುವುದನ್ನು ಸಾರ್ವಜನಿಕರು ತೀವ್ರ ವಿರೋಧಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಬೆಂಗಳೂರಿನ ಕಾವೇರಿ ಭವನದ ಮುಖ್ಯ ಇಂಜಿನಿಯರ್ ಮೂಲಕ ಮಂಗಳೂರು ವಲಯದ ಅಧೀಕ್ಷಕ ಇಂಜಿನಿಯರ್ರಿಗೆ ಎರಡು ಬಾರಿ ಪರಿಶೀಲನೆ ಮತ್ತು ಕ್ರಮ ಸೂಚನೆ ನೀಡಿದರೂ, ನಾಲ್ಕು ತಿಂಗಳುಗಿಂತಲೂ ಹೆಚ್ಚು ಸಮಯವಾದರೂ ವರದಿ ಸಲ್ಲಿಕೆಯಿಲ್ಲ. ಮೂರನೇ ದೂರು ನೀಡಿದರೂ ಪ್ರತಿಕ್ರಿಯೆ ಶೂನ್ಯವಾಗಿರುವುದರಿಂದ ಸಾರ್ವಜನಿಕರು ಈ ವಿಷಯವನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಮಾಹಿತಿಗಾಗಿ ಸಲ್ಲಿಸಲಾದ RTI ಅರ್ಜಿಗೂ ಸರಿಯಾದ ಮಾಹಿತಿಯನ್ನು ನೀಡಿ ಸ್ಪಷ್ಟತೆ ತರುವ ಬದಲು, ದಾಖಲೆಗಳನ್ನು ವಿಳಂಬಗೊಳಿಸಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ
“ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ದೂರುಗಳೇ ಶಕ್ತಿ. ಆದರೆ, ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮೌನ ನಡೆಯುತ್ತಿದ್ದು, ಇದು ಭ್ರಷ್ಟಚಾರಕ್ಕೆ ನಾಂದಿ ಬರೆಸುವಂತಿದೆಯೇ? ಯೋಜನೆ ಕಾರ್ಯತಂತ್ರದ ವೈಫಲ್ಯವೆನ್ನಬೇಕೇ?” – ನೂತನ ಬೆಟ್ಟಗೆರೆ
ಸ್ಥಳೀಯರು ಈಗ ಸಂಘಟಿತರಾಗ ಪ್ರತಿಭಟನೆ ತೀವ್ರಗೊಳಿಸಲು ತೀರ್ಮಾನಿಸಿದ್ದು, ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಿಸಿದ್ದಾರೆ. (ವರದಿ-ತನು ಕೊಟ್ಟಿಗೆಹಾರ)












