ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ಅರಣ್ಯ ಒತ್ತುವರಿ ತೆರವಿನ ಹೆಸರಲ್ಲಿ ರೈತರ ನೆಮ್ಮದಿ ಕಸಿಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಶೃಂಗೇರಿ ಬಿಜೆಪಿ ವತಿಯಿಂದ ಇದೇ ಸೋಮವಾರ (26.08.2024) ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ; ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಬೆಳೆ ಪರಿಹಾರ ಜಮಾ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ

ಪ್ರತಿಭಟನೆಗೆ ಕಾರಣವೇನು?;
- ಅರಣ್ಯ ಒತ್ತುವರಿ ತೆರವಿನ ಹೆಸರಲ್ಲಿ ರೈತರ ನೆಮ್ಮದಿ ಕಸಿಯುತ್ತಿರುವ ಹಿನ್ನೆಲೆ.
- ಪ್ರಕೃತಿಯನ್ನು ಪೂಜಿಸಿ ಗೌರವಿಸುವ ಅಮಾಯಕ ರೈತರನ್ನು ಭೂಗಳ್ಳರೆಂದು ಬಿಂಬಿಸುತ್ತಿರುವುದರಿಂದ.
- ಅರಣ್ಯದ ಪರಿಚಯವೇ ಇಲ್ಲದ ಅರಣ್ಯ ಸಚಿವರು ಒತ್ತುವರಿ ತೆರೆವಿನ ಬಗ್ಗೆ ನೀಡುತ್ತಿರುವ ಹೇಳಿಕೆ ವಿರೋಧಿಸಿ.
- ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಧಾರೆ ಎರೆದು. ಇಂದು ರೈತರ ಬದುಕಿಗೆ ಕೊಳ್ಳಿ ಇಡುವ ಕಂದಾಯ ಸಚಿವರ ಹೇಳಿಕೆ ವಿರೋಧಿಸಿ.
- ಬಡವರ ಶೋಷಣೆಯ ಅಧಿಕಾರವೆಂದು ದರ್ಪ ಮೆರೆಯುತ್ತಿರುವ ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಯ ಹೇಳಿಕೆ ವಿರೋಧಿಸಿ.
- ಪ್ರತಿನಿತ್ಯ ಆತಂಕ, ಕಣ್ಣೀರಿನೊಂದಿಗೆ ಬದುಕುತ್ತಿರುವ ಕೆರೆಕಟ್ಟೆ ಗ್ರಾಮಸ್ಥರಿಗೆ ಪುನರ್‌ವಸತಿ ಪ್ಯಾಕೇಜ್ ಅಂತಿಮಗೊಳಿಸದ ಬೇಜವಾಬ್ದಾರಿ ಶಾಸಕರ ವಿರುದ್ಧ.
- ಅಧಿಕಾರ ಕೊಟ್ಟರೂ ಫಾರಂ 50, 53, 57, 94C, 94CC ಮತ್ತು ಪಾರಂಪಾರಿಕ ಅರಣ್ಯ ಹಕ್ಕುಗಳ ಅರ್ಜಿಗಳನ್ನು ವಿಲೇವಾರಿ ಮಾಡದ, ಕ್ಷೇತ್ರದ ಜನರ ಹಿತಕಾಯಲು ವಿಫಲರಾದ ಕ್ಷೇತ್ರದ ಶಾಸಕರ ರಾಜೀನಾಮೆಗೆ ಆಗ್ರಹಿಸಿ.
- ಹಿಂದಿನ ಶಾಸಕರಾದ ಡಿ.ಎನ್. ಜೀವರಾಜ್ ನೀಡಿರುವ ಸಾಗುವಳಿ ಹಕ್ಕುಪತ್ರಗಳಿಗೆ ಇದುವರೆಗೂ ಪಹಣಿ ದಾಖಲಿಸದ ಶಾಸಕರ ನಿರ್ಲಕ್ಷ್ಯತನವನ್ನು ವಿರೋಧಿಸಿ.
- ಸುಳ್ಳು ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಮಂಕುಬೂದಿ ಎರಚಿದ ಕಾಂಗ್ರೆಸ್ ಸರಕಾರದ ವಿರುದ್ಧ.
- ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ನಯಾ ಪೈಸದ ಅಭಿವೃದ್ಧಿ ಕೆಲಸ ಮಾಡದ ದುರ್ಬಲ ಶಾಸಕರ ವಿರುದ್ಧ.
- ಮುಡಾ, ವಾಲ್ಮೀಕಿ ನಿಗಮ, ಸಹಕಾರ ಇಲಾಖೆ ಎಲ್ಲಾದರಲ್ಲೂ ಹಗರಣಗಳನ್ನು ಮಾಡುತ್ತಲೇ ಕಾಲ ಕಳೆಯುತ್ತಿರುವ ಭ್ರಷ್ಟ ಸರ್ಕಾರದ ವಿರೋಧ.
- ಸಂವಿಧಾನದ ಹೆಸರಲ್ಲಿ ಜನರನ್ನು ವಂಚಿಸಿ, ಸಂವಿದಾನಕ್ಕೆ ಅಗೌರವ ತೋರುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ
ಈ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ ಹೋರಾಟಕ್ಕೆ ಕೆರೆ ನೀಡಿದೆ
ಇದನ್ನೂ ಓದಿ; 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಯಾವ ರೈತರ ಎಷ್ಟು ಸಾಲಮನ್ನಾ ಆಗಿದೆ, ಹೀಗೆ ಚೆಕ್ ಮಾಡಿ












