ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಸುವಿನ ಮೈಗೆ ಸೆಂಟ್ ಬಾಟಲಿಯಿಂದ ಸ್ಪ್ರೇ ಮಾಡಿ ಬೆಂಕಿ ಹಚ್ಚಿ ಹಿಂಸೆ ಮಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಇದನ್ನೂ ಓದಿ: ಹೊಲಿಗೆ ಯಂತ್ರ, ದ್ವಿಚಕ್ರ ವಾಹನ ಪಡೆಯಲು ಅರ್ಜಿ ಆಹ್ವಾನ

ವಿಜಯಪುರ ಮುಖ್ಯ ರಸ್ತೆಯ ಕಡೆಯಿಂದ ಮಲ್ಲಂದೂರು ರಸ್ತೆ ಕಡೆಗೆ ಹೋಗಲು ಇರುವ ಟಾರು ರಸ್ತೆಯ ಬದಿಯಲ್ಲಿ ಹಸುವಿಗೆ ಶೋಯಬ್ (16) ಎಂಬ ಯುವಕ ಸೆಂಟ್ ಬಾಟಲಿಯಿಂದ ಮೈಗೆ ಸ್ಪ್ರೇ ಮಾಡಿ ಬಳಿಕ ಲೈಟರ್ ನಿಂದ ಬೆಂಕಿ ಹಚ್ಚಿ ಹಿಂಸೆ ಮಾಡುತ್ತಿದ್ದದ್ದನ್ನು ಗಮನಿಸಿ ಯುವಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸಂಜೀವಿನಿ ಯೋಜನೆ ಜಾರಿ; ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ
ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲು:
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ಯಾಮ್, ಸಂತೋಷ್ ಕೋಟ್ಯಾನ್ ಮತ್ತು ಇತರರ ವಿರುದ್ಧ ಯುವಕನ ಪೋಷಕರು ಹಲ್ಲೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಈ ದಾಖಲೆಗಳಿದ್ರೆ ನಿಮ್ಮ ಮಕ್ಕಳಿಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸಬಹುದು!












